ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ 
ರಾಜ್ಯ

ಅಪಘಾತ: ಅನಂತ್ ಕುಮಾರ್ ಹೆಗಡೆ ಪ್ರಾಣಾಪಾಯದಿಂದ ಪಾರು, ಸಚಿವರಿಂದ ಕೊಲೆ ಯತ್ನ ಆರೋಪ

ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಮಂಗಳವಾರ ತಡರಾತ್ರಿ ಸಂಭವಿಸಿದ ಅಪಘಾತವೊಂದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ...

ಹಾವೇರಿ: ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಮಂಗಳವಾರ ತಡರಾತ್ರಿ ಸಂಭವಿಸಿದ ಅಪಘಾತವೊಂದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಅನಂತ್ ಕುಮಾರ್ ಹೆಗಡೆಯವರು ಶಿರಸಿಯಿಂದ ಬೆಂಗಳೂರಿಗೆ ಸಾಗುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹಲಗೇರಿ ಕ್ರಾಸ್ ಬಳಿ ಲಾರಿಯೊಂದು ಸಚಿವರ ಬೆಂಗಾವಲು ವಾಹನಕ್ಕೆ ಡಿಕ್ಕೆ ಹೊಡೆದಿದೆ. ಸಚಿವರ ಕಾರು 140 ಕಿ.ಮೀ ವೇಗದಲ್ಲಿದ್ದು, ಕೂದಲೆಳೆ ಅಂತರದಲ್ಲಿ ಮುಂದೆ ಹೋದ ಕಾರಣ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅನಂತ್ ಕುಮಾರ್ ಹೆಗಡೆಯವರು ಪ್ರಾಣಾಪಾಯದಿಂದ ಪಾರಾಗಿದ್ದು, ಅನಂತ್ ಕುಮಾರ್ ಅವರ ಬೆಂಗಾವಲು ವಾಹನದಲ್ಲಿದ್ದ ಸಿಬ್ಬಂದಿಯೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. 
ಘಟನೆ ಬೆನ್ನಲ್ಲೇ ಹೆಗಡೆಯವರು ಸರಣಿ ಟ್ವೀಟ್ ಮಾಡಿದ್ದು, ಅದರಲ್ಲಿ ಲಾರಿ ಚಾಲಕನ ಗುರಿ ನನ್ನ ಕಾರೇ ಆಗಿತ್ತು ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. 
ಇದು ನನ್ನ ಹತ್ಯೆ ಉದ್ದೇಶಪೂರ್ವಕವಾಗಿ ನಡೆದ ಯತ್ನದಂತೆ ಕಾಣುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ನನ್ನು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮೇಲ್ನೋಟಕ್ಕೆ ಆ ಲಾರಿಯ ಗುರಿ ನನ್ನ ಕಾರೇ ಆಗಿತ್ತು. ವಿರುದ್ಧ ದಿಕ್ಕಿನಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿದ್ದ ಲಾರಿಯು ಏಕಾಏಕಿ ವೇಗವಾಗಿ ಚಲಿಸಲಾರಂಭಿಸಿತು. ಆದರೆ, ನನ್ನ ಕಾರು ವೇಗವಾಗಿದ್ದ ಕಾರಣ ಲಾರಿ ಡಿಕ್ಕಿ ಹೊಡೆಯುವುದರಿಂದ ಪಾರಾಯಿತು. ಆದರೆ, ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು. ಘಟನೆ ನಂತರ ಲಾರಿ ಚಾಲಕನನ್ನು ಸ್ಥಳೀಯರೇ ವಶಕ್ಕೆ ಪಡೆದುಕೊಂಡಿದ್ದಾರೆ. ಆದನ ಹೆಸರು ನಾಸಿರ್ ಎಂದು ತಿಳಿದುಬಂದಿದೆ. 
ಆತ ಮದ್ಯ ಸೇವಿಸಿದಂತೆ ಅನಿಸಲಿಲ್ಲ. ಘಟನೆಯಲ್ಲಿ ಬೆಂಗಾವಲು ವಾಹನದ ಸಿಬ್ಬಂದಿಯ ಭುಜದ ಮೂಳೆ ಮುರಿದಿದೆ. ಎಂದು ಅನಂತ್ ಕುಮಾರ್ ಹೆಗಡೆ ಸರಣಿ ಟ್ವೀಟ್ ಮಾಡಿದ್ದಾರೆ. 
ಅಲ್ಲದೆ. ಚಿಕ್ಕಮಗಳೂರಿನ ಲಾರಿಯು ಹೆದ್ದಾರಿ ಬೆಂಗಾವಲು ವಾಹನಕ್ಕೆ ಡಿಕ್ಕೆ ಹೊಡೆದ ದೃಶ್ಯ ಹಾಗೂ ಲಾರಿ ಚಾಲಕನ ಚಿತ್ರಗಳನ್ನೂ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. 
ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು, ಲಾರಿ ಚಾಲಕನಿಂದ ಸತ್ಯ ಬಾಯಿಬಿಡಿಸಬೇಕು. ಈ ಅಪಘಾತದ ಹಿಂದೆ ಭಾರೀ ಷಡ್ಯಂತ್ರವಿರುವ ಅನುಮಾನ ಇದೆ. ಪೊಲೀಸರು ಸತ್ಯ ಹೊರತೆಗೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
ಈ ನಡುವೆ ಸ್ಥಳಕ್ಕಾಗಮಿಸಿರುವ ಹಲಗೇರಿ ಪೊಲೀಸರು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT