ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮೊಬೈಲ್ ಗಾಗಿ ಯುವಕನ ಕೊಲೆ, ಇಬ್ಬರ ಬಂಧನ

ಯುವಕನೊಬ್ಬನ ಮೊಬೈಲ್ ಸೇರಿ ಇತರೆ ವಸ್ತುಗಳನ್ನು ದೋಚಿದ್ದಲ್ಲದೆ ಅವನನ್ನು ಹತ್ಯೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಬ್ಯಾಟರಾಯನಪುರ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಯುವಕನೊಬ್ಬನ ಮೊಬೈಲ್ ದೋಚಿದ್ದಲ್ಲದೆ ಅವನನ್ನು ಹತ್ಯೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಬ್ಯಾಟರಾಯನಪುರ ಪೋಲೀಸರು ಬಂಧಿಸಿದ್ದಾರೆ.
ಸದ್ದಾಂ ಹುಸೇನ್ ಅಲಿಯಾಸ್ ಸಿದ್ದಕಿ ಅಲಿಯಾಸ್ ತೋಳ((20), ಮಹಮದ್ ಶಫಿ (19) ಎನ್ನುವವರನ್ನು ಬಂಧಿಸಲಾಗಿದ್ದು ಬಂಧಿತರು ಚಂದ್ರಾ ಲೇಔಟ್ ನ ಗಂಗೊಂಡನಹಳ್ಳಿ ನಿವಾಸಿಗಳೆನ್ನಲಾಗಿದೆ.
ಆರೋಪಿಗಳು ರಾಹುಲ್ ಅಲಿಯಾಸ್ ಸಿದ್ದೇಶ್ (18) ಎನ್ನುವವನ ಮೇಲೆರಗಿ ಆತನ ಮೊಬೈಲ್ ಅನ್ನು ದೋಚಿದ್ದಾರೆ. ಏಪ್ರಿಲ್ 12ರ ರಾತ್ರಿ ಈ ಘಟನೆ ನಡೆದಿದ್ದು ಹತ್ಯೆಗೀಡಾದ ರಾಹುಲ್ ಮಲ್ಲತ್ ಹಳ್ಳಿಯ ಚಿತ್ರಮಂದಿರದಲ್ಲಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದನು. ಈತ ದೀಪಾಂಜಲಿನಗರ ನಿವಾಸಿಯಾಗಿದ್ದನೆಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಅಂದು ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ರಾಹುಲ್ ನಾಯಂಡನಹಳ್ಳಿ ಮೆಟ್ರೋ ನಿಲ್ದಾಣ ಬಳಿಯ ಕ್ವಾಲಿಟಿ ಬಿಸ್ಕೆಟ್ ಫ್ಯಾಕ್ಟರಿ ಸಮೀಪ ಬಂದಾಗ ರಾತ್ರಿ 11ರ ಸುಮಾರಿಗೆ ಆತನ ಮೇಲೆ ದಾಳಿ ನಡೆದಿದೆ. ದರೋಡೆಕೋರರು ಅವನ ಬಳಿಯಿದ್ದ ಮೊಬೈಲ್ ಅನ್ನು ಲೂಟಿ ಮಾಡಿದ್ದಾರೆ ಎಂದು ಪೋಲೀಸರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ; ಎಲ್ಲಿದೆ ನ್ಯಾಯ? VHP

ರೋಡ್‌ಶೋ ವೇಳೆ 'ಸಿಗ್ಮಾ' ಫ್ರೇಮ್ ಎತ್ತಿಹಿಡಿದ ತಮಿಳುನಾಡು CM ವಿಜಯ್; ಮಗನ ಸಿನಿಮಾಗೆ ತಂದೆಯ ಬೆಂಬಲ! ವಿಡಿಯೋ ವೈರಲ್