ಸಾಂದರ್ಭಿಕ ಚಿತ್ರ 
ರಾಜ್ಯ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹುಲಿ ಪ್ರಾಧಿಕಾರದ ತಡೆ

ಪಶ್ಚಿಮ ಘಟ್ಟದ ಮೂರು ಆನೆ ಕಾರಿಡಾರ್ ಗಳನ್ನು ಒಳಗೊಂಡಿರುವ, ಹುಲಿ ಮತ್ತು ವನ್ಯಮೃಗ ....

ಬೆಂಗಳೂರು: ಪಶ್ಚಿಮ ಘಟ್ಟದ ಮೂರು ಆನೆ ಕಾರಿಡಾರ್ ಗಳನ್ನು ಒಳಗೊಂಡಿರುವ, ಹುಲಿ ಮತ್ತು ವನ್ಯಮೃಗ ಅಭಯಾರಣ್ಯಗಳನ್ನು ಒಳಗೊಂಡ ದಟ್ಟ ಅರಣ್ಯದ ಮೂಲಕ ಹಾದುಹೋಗುವ ಹುಬ್ಬಳ್ಳಿ-ಅಂಕೊಲಾವರೆಗೆ ಉದ್ದೇಶಿತ 168.28 ಕಿಲೋ ಮೀಟರ್ ಉದ್ದದ ಬ್ರಾಡ್ ಗೇಜ್ ರೈಲು ಮಾರ್ಗವನ್ನು ರಾಷ್ಟ್ರೀಯ ಹುಲಿ ಅಭಯಾರಣ್ಯ ಪ್ರಾಧಿಕಾರ ತಿರಸ್ಕರಿಸಿದೆ.

ಇದು ಜೀವವೈವಿಧ್ಯದ ತಾಣ ಮಾತ್ರವಲ್ಲದೆ ವಿಶ್ವಪರಂಪರೆಯ ನೆಲೆಯಾಗಿದೆ ಮತ್ತು ಯೋಜನೆ ಜಾರಿಗೆ ಬಂದರೆ ಆನೆಗಳ ಹಳೆಯ ವಲಸೆ ತಾಣವನ್ನು ತುಂಡು ಮಾಡುವುದಲ್ಲದೆ ಹುಲಿ ಅಭಯಾರಣ್ಯದ ಆವಾಸಸ್ಥಾನ ಸಂಪರ್ಕವನ್ನು ಮುರಿಯುತ್ತದೆ.

ಕಳೆದ ಜುಲೈಯಲ್ಲಿ ಪರಿಸರ, ಅರಣ್ಯ ಸಚಿವಾಲಯದ ಸ್ಥಳೀಯ ಸಶಕ್ತೀಕರಣ ಸಮಿತಿ ಯೋಜನೆಗೆ ಮೊದಲನೇ ಹಂತದ ಅನುಮೋದನೆಯನ್ನು ಶಿಫಾರಸು ಮಾಡಿತ್ತು. ಆದರೆ ಅದು ವಿವಿಧ ಷರತ್ತುಗಳೊಂದಿಗೆ. ಪ್ರಾದೇಶಿಕ ಅಧಿಕಾರ ಸಮಿತಿ ರೈಲ್ವೆ ಸಚಿವಾಲಯಕ್ಕೆ ಇನ್ನೂ ಹೆಚ್ಚಿನ ಸುರಂಗಮಾರ್ಗಗಳನ್ನು ಕೇಳಿತ್ತು. ರೈಲ್ವೆ ಸಚಿವಾಲಯ ಸಲ್ಲಿಸಿರುವ ಹೊಸ ಪ್ರಸ್ತಾವನೆಗಳಲ್ಲಿ 34 ಸುರಂಗಗಳು ಮತ್ತು 9 ರೈಲ್ವೆ ನಿಲ್ದಾಣಗಳು ಬೇಕಾಗಿದ್ದು ಆದರೆ ಹೆಚ್ಚಿನ ಅರಣ್ಯ ಪ್ರದೇಶಗಳ ಅವಶ್ಯಕತೆಯಿದೆ ಎಂದು ಹೇಳಿದೆ.

ವನ್ಯಜೀವಿಗಳಿಗೆ ಸುರಂಗಮಾರ್ಗಗಳ ನಿರ್ಮಾಣ ಸೇರಿದಂತೆ ತಗ್ಗಿಸುವ ಕ್ರಮಗಳನ್ನು ಪುನರ್ ಪರಿಶೀಲಿಸಲು ಪ್ರಾದೇಶಿಕ ಅಧಿಕಾರ ಸಮಿತಿ ಹೇಳಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಹರ್ಷ ವರ್ಧನ ರಾಷ್ಟ್ರೀಯ ವನ್ಯಮೃಗ ಮಂಡಳಿಯ 48ನೇ ಸ್ಥಾಯಿ ಸಮಿತಿ ಸಭೆಯಲ್ಲಿ, ರಾಷ್ಟ್ರೀಯ ಹುಲಿ ಮೀಸಲು ಪ್ರಾಧಿಕಾರದ ಸ್ಥಳ ತಪಾಸಣೆಯಲ್ಲಿ ಯೋಜನೆಯನ್ನು ಶಿಫಾರಸು ಮಾಡದೆ ತಿರಸ್ಕರಿಸಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT