ಕಥುವಾ ಸಂತ್ರಸ್ತೆಗೆ ನ್ಯಾಯಕ್ಕಾಗಿ ರ್ಯಾಲಿಯಲ್ಲಿ ಹಿಂಸಾಚಾರ: ಮೈಸೂರಿನಲ್ಲಿ ಐವರ ಬಂಧನ
ಕಥುವಾ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ರ್ಯಾಲಿಯ ವೇಳೆ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಐವರು ...
ಮೈಸೂರು: ಕಥುವಾ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ರ್ಯಾಲಿಯ ವೇಳೆ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಐವರು ವ್ಯಕ್ತಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.
ಹಿಂಸಾಚಾರದ ವೇಳೆ ಕ್ಯಾತಮಾರನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ಗಾಯವಾಗಿತ್ತು. ಐವರನ್ನು ಬಂಧಿಸಿರುವ ಪೊಲಿಸರು ನ್ಯಾಯಾಂಗ ಬಂಧನಕ್ಕೆ ವಹಿಸಿದ್ದಾರೆ.
ಬಂಧನ ಖಚಿತ ಪಡಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎನ್. ವಿಷ್ಣುವರ್ದನ್ ಇದೊಂದು ಸೂಕ್ಷ್ಮ ವಿಷಯವಾಗಿದ್ದು. ಬಂಧಿತ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಲಾಗದು ಎಂದು ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 4.20 ರವರೆಗೆ ನಡೆದ ಪ್ರತಿಭಟನೆಯಲ್ಲಿ ನಾಲ್ಕು ಕೇಸ್ ಗಳು ದಾಖಲಾಗಿವೆ,ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ಮತ್ತು ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿವೆ,ಕೆಎಸ್ ಆರ್ ಟಿ,ಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಗಲಭೆಕೋರರು ಅಂಗಡಿಯೊಂದನ್ನು ಧ್ವಂಸಗೊಳಿಸಿದ್ದರು, ಅಂಗಡಿಯಲ್ಲಿದ್ದ ಹಣ ಮತ್ತು ಮತ್ತಿತರ ವಸ್ತುಗಳನ್ನು ಕೊಂಡೊಯ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ಮಹದೇವಪು ರಸ್ತೆಯ ಸರ್ಕಲ್ ನಲ್ಲಿ ಕರ್ತವ್ಯದ ಮೇಲಿದ್ದೆ, ಈ ವೇಳೆ ಆಗಮಿಸಿದ ಸುಮಾರು 100-120 ಮಂದಿ ಗಲಭೆಕೋರರು ದೊಣ್ಣೆ ಹಾಗೂ ಕಲ್ಲುಗಳನ್ನು ಹಿಡಿದು ಕೊಂಡು ನನ್ನ ಮುಂದೆ ಸಾಗಿದರು. ಅನುಮತಿ ಪಡೆಯದೇ ಪ್ರತಿಭಟನೆ ರ್ಯಾಲಿ ಹಮ್ಮಿಕೊಳ್ಳುವಂತಿಲ್ಲ ಶಾಂತಿಯುತ ವಾಗಿ ಪ್ರತಿಭಟನೆ ನಡೆಸಿ ಎಂದು ನಾನು ಮನವಿ ಮಾಡಿದೆ, ಇದರಿಂದ ಕೆರಳಿದ ಅವರು ನನ್ನತ್ತ ಕಲ್ಲು ತೂರಿದರು, ಇದರಿಂದ ನನ್ನ ತಲೆಗೆ ಗಾಯವಾಯಿತು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಹೇಳಿದ್ದಾರೆ.