ರಾಜ್ಯ

ಎಟಿಎಂ ನೋ ಕ್ಯಾಶ್: ಐಟಿ ದಾಳಿ ವೇಳೆ ಮೈಸೂರು ಗುತ್ತಿಗೆದಾರರಿಂದ ರೂ.6.7 ಕೋಟಿ ನಗದು ವಶ

Vishwanath S
ಮೈಸೂರು: ವಾರದಿಂದ ರಾಜ್ಯದ ಕೆಲ ಎಟಿಎಂ ಮುಂದೆ ನೋ ಕ್ಯಾಶ್ ಬೋರ್ಡ್ ಗಳನ್ನು ನೋಡಿ ಜನರು ರೋಸಿ ಹೋಗಿದ್ದರು. ಇದೀಗ ಎಟಿಎಂಗಳಲ್ಲಿ ಕ್ಯಾಶ್ ಇಲ್ಲದ್ದಕ್ಕೆ ಉತ್ತರ ಸಿಕ್ಕಿದೆ. 
ಹೌದು, ರಾಜ್ಯದ ಕೆಲ ಗುತ್ತಿಗೆದಾರರು ಕೋಟಿ ಕೋಟಿ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಮೈಸೂರಿನಲ್ಲಿ ಕಳೆದ ಎರಡು ದಿನಗಳಿಂದ ಗುತ್ತಿಗೆದಾರರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು ಈ ವೇಳೆ ಕೋಟ್ಯಂತರ ರುಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಎರಡು ದಿನದ ದಾಳಿಯಲ್ಲಿ ಅಧಿಕಾರಿಗಳಿಗೆ ಮೈಸೂರಿನ ಗುತ್ತಿಗೆದಾರ ಮರಿಸ್ವಾಮಿ ಎಂಬುವರ ಮನೆಯಲ್ಲಿ ಸಿಕ್ಕಿರುವ ಹಣ 6.7 ಕೋಟಿ ರುಪಾಯಿ. ಇವೆಲ್ಲಾ 2 ಸಾವಿರ ಮತ್ತು 500 ರುಪಾಯಿ ಮುಖಬೆಲೆಯ ನೋಟುಗಳಾಗಿವೆ. ಒಟ್ಟಾರೆ ಆದಾಯ ತೆರಿಗೆ ಅಧಿಕಾರಿಗಳು 10 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ವಶಕ್ಕೆ ಪಡೆದಿದ್ದಾರೆ. 
ಕೆಲ ದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಹಲವು ಕಡೆ ನಗದಿನ ಕೊರತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಕರ್ನಾಟಕ ರಾಜ್ಯದ ಗುತ್ತಿಗೆದಾರರ ಬಳಿ ಭಾರೀ ಪ್ರಮಾಣದ ಹಣ ಇರುವ ಅಂಶ ಧೃಡಪಟ್ಟಿದೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
SCROLL FOR NEXT