ಸಂಗ್ರಹ ಚಿತ್ರ 
ರಾಜ್ಯ

ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಚಕ್ಕರ್ ಹೊಡೆದ್ರೆ ಜೈಲು: ಸಂಜೀವ್ ಕುಮಾರ್

ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಚಕ್ಕರ್ ಹೊಡೆದ್ರೆ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಚಕ್ಕರ್ ಹೊಡೆದ್ರೆ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ  ಸಂಜೀವ್ ಕುಮಾರ್ ಅವರು, ಚುನಾವಣಾ ಹೊತ್ತಲ್ಲಿ ಸರ್ಕಾರಿ ಅಧಿಕಾರಿಗಳು ರಜೆ ಹಾಕಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕಾಗುತ್ತದೆ ಎಂದು ಹೇಳಿದರು.
ಹಾಲಿ ಚುನಾವಣೆಯಲ್ಲಿ ವಿವಿಪಾಟ್ ಗಳನ್ನು ಬಳಕೆ ಮಾಡುತ್ತಿರುವುದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಗಳು ಬೇಕು. ಈ ಮೊದಲು ಮತಗಟ್ಟೆಗೆ ನಾಲ್ಕು ಮಂದಿ ಸಿಬ್ಬಂದಿಯಂತೆ ನೇಮಕ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿವಿಪಾಟ್ ಗಳ ಬಳಕೆಯಿಂದಾಗಿ ಹೆಚ್ಚವರಿಯಾಗಿ ಓರ್ವ ಸಿಬ್ಬಂದಿ ಬೇಕಾಗುತ್ತದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ 3.4 ಲ ಸಿಬ್ಬಂದಿಗಳು  ಬೇಕು. ಅಂದರೆ 40 ರಿಂದ 50 ಸಾವಿರ ಸಿಬ್ಬಂದಿ ಕೊರತೆ ಎದುರಾಗುವುದರಿಂದ ಸಿಬ್ಬಂದಿಗಳಿಗೆ ಆಯೋಗ ಈ ಎಚ್ಚರಿಕೆ ನೀಡಿದೆ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ನೋಟಾ ಹೆಚ್ಚಾದರೆ ಮರು ಚುನಾವಣೆ ಇಲ್ಲ
ಇದೇ ವೇಳೆ ಈ ಬಾರಿಯ ಚುನಾವಣೆಯಲ್ಲಿ ನೋಟಾ (ಮತದಾನ ತಿರಸ್ಕಾರ) ಪ್ರಮಾಣ ಎಷ್ಟೇ ಆದರೂ ಮರು ಚುನಾವಣೆಗೆ ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಚಲಾವಣೆ ಆಗಿರುವ ಮತಗಳ ಪೈಕಿ ಅತಿ ಹೆಚ್ಚು ಮತಪಡೆದವರನ್ನು ವಿಜಯಿ ಎಂದು ಘೊಷಿಸಲಾಗುವುದು.ನೋಟಾ ಚಿಹ್ನೆ ಎಲ್ಲ ಇವಿಎಂಗಳಲ್ಲೂ ಇರುತ್ತದೆ. ಇದರ ಮೂಲಕ ಯಾವುದೇ ಅಭ್ಯರ್ಥಿಗೆ ಮತ ಬೇಡ ಎನ್ನುವವರು ನೋಟಾ ಚಲಾಯಿಸಬಹುದು  ಎಂದು ಅವರು ಮಾಹಿತಿ ನೀಡಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್