ಬೆಂಗಳೂರು: ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿಯ ಅಲೂರು ಬಳಿ ಮುಂಬೈಯ ರಾಷ್ಟ್ರೀಯ ತನಿಖಾ ದಳ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು 7 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದೆ.
ದೇವನಹಳ್ಳಿ ತಾಲೂಕ್ ವಿಜಯಪುರ ನಿವಾಸಿ ರಾಜು, ಬಾಗಲಕೋಟೆ ಜಿಲ್ಲೆ ಮುದೋಳದ ಗಂಗಾಧರ್ ಕೊಲ್ಕರ್, ಮತ್ತು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಸಜ್ಜದ್ ಆಲಿ ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಅಲೂರು ಬಳಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ ಆರೋಪಿಗಳು ಮೂವರು ಬಂಧಿಸಿದ್ದಾರೆ. ದಾಳಿ ವೇಳೆಯಲ್ಲಿ 2 ಸಾವಿರ ಮುಖಬೆಲೆಯ 4.34 ಲಕ್ಷ ರೂ. ಹಾಗೂ ಶ್ರೀರಾಮಪುರದ ಮಹಿಳೆಯೊಬ್ಬರಿಂದ 2.5 ಲಕ್ಷ ರೂ ಸೇರಿದಂತೆ ಒಟ್ಟು ಏಳು ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಐಎ ಹೇಳಿಕೆ ನೀಡಿದೆ.
ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.