ಸಾಂದರ್ಭಿಕ ಚಿತ್ರ 
ರಾಜ್ಯ

ಪ್ಲಾಸ್ಟಿಕ್ ಹಾವಳಿಯಿಂದ ರಕ್ಷಿಸಿ, ಬೆಂಗಳೂರಿನ ಸೌಂದರ್ಯ ಕಾಪಾಡಿ; ಸರ್ಕಾರಕ್ಕೆ ಹೈಕೋರ್ಟ್ ಆದೇಶ

ನಗರದಲ್ಲಿ ಎಲ್ಲೆಂದರಲ್ಲಿ ಇರುವ ಪ್ಲಾಸ್ಟಿಕ್ ಹಾವಳಿಯನ್ನು ನಿಯಂತ್ರಿಸಿ ನಗರವನ್ನು ಸುಂದರವಾಗಿಟ್ಟುಕೊಳ್ಳಿ ...

ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಇರುವ ಪ್ಲಾಸ್ಟಿಕ್ ಹಾವಳಿಯನ್ನು ನಿಯಂತ್ರಿಸಿ ನಗರವನ್ನು ಸುಂದರವಾಗಿಟ್ಟುಕೊಳ್ಳಿ, ಇದು ನಿಮ್ಮ ಬೆಂಗಳೂರು, ನಮ್ಮ ಬೆಂಗಳೂರು ಮತ್ತು ಪ್ರತಿಯೊಬ್ಬರ ಬೆಂಗಳೂರು, ಇದು ಸಿಲಿಕಾನ್ ಸಿಟಿ, ಇಲ್ಲಿ ಹಲವು ನ್ಯೂನತೆಗಳಿದ್ದರೂ ಕೂಡ ಕಲೆ, ಸಂಸ್ಕೃತಿ, ಸೌಂದರ್ಯ ಮತ್ತು ಉತ್ತಮ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಶಿಸ್ತಿಗೆ ಹೆಸರುವಾಸಿಯಾದ ನಗರವಿದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್ ದೇವದಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠ ಛೀಮಾರಿ ಹಾಕಿದೆ. ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳು, ಹೋರ್ಡಿಂಗ್ ಗಳನ್ನು ತೆಗೆದುಹಾಕಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ವಿರುದ್ಧವಾಗಿ ಹೊರಾಂಗಣ ಜಾಹಿರಾತು ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಛೀಮಾರಿ ಹಾಕಿದರು.

ಅನಧಿಕೃತ ಜಾಹಿರಾತುಗಳು ಮತ್ತು ಅತಿಯಾದ ಪ್ಲಾಸ್ಟಿಕ್ ಗಳ ಬಳಕೆಗಳು ನಗರದ ಸೌಂದರ್ಯವನ್ನು ಹಾಳುಗೆಡವುತ್ತಿದೆ ಎಂದ ನ್ಯಾಯಾಲಯ ಘನತ್ಯಾಜ್ಯ ನಿರ್ವಹಣೆಯಲ್ಲಿನ ಸಮಸ್ಯೆಗಳಿಂದಾಗಿ ನಗರದ ಕೆರೆಗಳಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿನ ಕೆರೆಗಳಿಂದಲೇ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಿಗೆ ನೀರು ಪೂರೈಕೆಯಾಗಬೇಕು ಎಂದು ಹೇಳಿದೆ.

ನಿಮ್ಮದೇ ವರದಿಗಳು ನಗರದ ಕೆರೆಗಳ ನೀರು ಮಲಿನವಾಗುತ್ತಿದೆ ಎಂದು ಹೇಳುತ್ತದೆ ಎಂದು ಹೊರಾಂಗಣ ಜಾಹಿರಾತು ಒಕ್ಕೂಟಕ್ಕೆ ಹೇಳಿದೆ. ಅನಧಿಕೃತ ಫ್ಲೆಕ್ಸ್ ಗಳನ್ನು ತೆಗೆಯುವಾಗ ಬಿಬಿಂಪಿ ಕೆಲಸಗಾರರ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು  ಈ ಕುರಿತ ಅಂತಿಮ ವರದಿ ಸಿದ್ದವಾಗಿದೆ ಎಂದು ಅಡ್ವಕೇಟ್ ಜನರಲ್ ಉದಯ್ ಹೊಳ್ಳ ಸಲ್ಲಿಸಿದರು. ತಮಿಳುನಾಡಿನಲ್ಲಿ ಬಂಧಿಯಾಗಿದ್ದ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಗೋಡೆಗಳ ಮೇಲೆ ಪ್ಲಾಸ್ಟಿಕ್ ಪೋಸ್ಟರ್ ಗಳನ್ನು ಅಂಟಿಸಿ ವಿಕಾರಗೊಳಿಸುವಿಕೆ:
ನಗರದಾದ್ಯಂತ ಗೋಡೆಗಳ ಮೇಲೆ ಪೋಸ್ಟರ್ ಗಳನ್ನು ಅಂಟಿಸಿ ನಗರದ ಸೌಂದರ್ಯಗಳನ್ನು ಹಾಳು ಮಾಡಲಾಗುತ್ತಿದೆ. ಅನಗತ್ಯ ಪೋಸ್ಟರ್ ಗಳನ್ನು ಹಚ್ಚದಂತೆ ಪೊಲೀಸರು ನೋಡಿಕೊಳ್ಳಬೇಕು. ಪೊಲೀಸರು ನಗರದಾದ್ಯಂತ ಗಸ್ತು ತಿರುಗಬೇಕು ಮತ್ತು ಸಿಸಿಟಿವಿ ಕ್ಯಾಮರಾಗಳ ಮೂಲಕ ಪರಿಶೀಲಿಸಬೇಕು ಎಂದು ಹೈಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!