ರಾಜ್ಯ

ಕರ್ನಾಟಕ: 8,487 ಸರ್ಕಾರಿ ಶಾಲಾ ಕಟ್ಟಡಗಳ ತುರ್ತು ದುರಸ್ತಿಗೆ ಬೇಕು 107 ಕೋಟಿ!

Raghavendra Adiga
ಬೆಂಗಳೂರು: ರಾಜ್ಯದಲ್ಲಿರುವ 8,487 ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿ, ನವೀಕರಣ ಮತ್ತು ಪುನರ್ ನಿರ್ಮಾಣಕ್ಕಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಗೆ ತಕ್ಷಣಾವೇ 107 ಕೋಟಿ ರೂ. ಅಗತ್ಯವಿದೆ. ಈ ಸಂಬಂಧ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು  ಮತ್ತು ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜತೆಗಿನ ಸಭೆಯೊಂದರಲ್ಲಿ ಇಲಾಖೆಯು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿತ್ತು.
ಎಕ್ಸ್ ಪ್ರೆಸ್ ಗೆ ದೊರಕಿರುವ ಮಾಹಿತಿಯಂತೆ  ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ನವೀಕರಣಗೊಳಿಸಲು ಹಣದ ಅಗತ್ಯವಿದೆ.ತುರ್ತುಸ್ಥಿತಿ ರಿಪೇರಿ ಮತ್ತು ನವೀಕರಣ ಆಗಬೇಕಿದ್ದು ಶಿಥಿಲವಾದ ಗೋಡೆಗಳು, ಸೋರುವ ಛಾವಣಿ, ಶೌಚಾಲಯಗಳು, ಶೌಚಾಲಯದ ಕಿಟಕಿ, ಬಾಗಿಲಿನ ದುರಸ್ತಿ, ಹಾಳಾದ ನೆಲದ ನವೀಕರಣ ಸೇರಿ ಅನೇಕ ಕಾಮಗಾರಿಗಳಿಗೆ ಹಣ ಬೇಕಾಗಿದೆ ಎಂದು ಇಲಾಖೆ ಮೂಲಗಳು ಹೇಳೀದೆ.
"ಈ ದುರಸ್ತಿ, ನವೀಕರಣ ಕಾರ್ಯವು ಸಾಧ್ಯವಾದಷ್ಟು ಬೇಗನೇ ಆಗಬೇಕಿದೆ.ಏಕೆಂದರೆ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಇದರಿಂದಾಗಿ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುವುದು ಸಹ ನಿಜಕ್ಕೂ ಅಪಾಯಕಾರಿಯಾಗಿದೆ"ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
7,001 ಪ್ರಾಥಮಿಕ ಮತ್ತು 1,486 ಪ್ರೌಢಶಾಲೆಗಳಲ್ಲಿ ಅತಿ ಶೀಘ್ರವಾಗಿ ದುರಸ್ತಿ ಕಾಮಗಾರಿಗಳು ಪ್ರಾರಂಭವಾಗಬೇಕಿದೆ. ಹಾಸನ ಜಿಲ್ಲೆಯಲ್ಲಿಯೇ ಇಂತಹಾ 662 ಶಾಲೆಗಳಿದೆ.ಮಂಡ್ಯ, ಬೆಳಗಾವಿ, ಚಿಕ್ಕೋಡಿ, ಕೋಲಾರ ಹಾಗೂ ಬಳ್ಳಾರಿ ನಂತರದ ಸ್ಥಾನದಲ್ಲಿವೆ.ಕೊಡಗಿನಲ್ಲಿ 20ಶಾಲೆಗಳು ತೀವ್ರ ಅಪಾಯದಲ್ಲಿದ್ದು ದುರಸ್ತಿ ಕಾರ್ಯ ಕೈಗೊಳ್ಳುವ ತುರ್ತು ಅಗತ್ಯವಿದೆ.ಬೀದರ್, ಉಡುಪಿ, ಗದಗ ಮತ್ತು ಬೆಂಗಳೂರು ಉತ್ತರ. ಜಿಲ್ಲೆಯ ಶಾಲೆಗಳು ಸಹ ಕಾಮಗಾರಿ, ನವೀಕರಣಗೊಳ್ಳಲು ಕಾಯುತ್ತಿದೆ.
ತುರ್ತು ಸಂದರ್ಭಗಳಲ್ಲಿ ಇಂತಹಾ ದುರಸ್ತಿಗಳಿಗಾಗಿ ಆಯಾ ಗ್ರಾಮ ಪಂಚಾಯತ್ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ನಿಧಿಯನ್ನು ತಲುಪಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಕ್ಕಳ ಸುರಕ್ಷತೆ
ರಾಜ್ಯದಲ್ಲಿ ಅಸುರಕ್ಷಿತವಾಗಿರುವ ಶಾಲಾ ಕಟ್ಟಡದಲ್ಲಿಯೇ ನಿತ್ಯವೂ ಸಾವಿರಾರು ಮಕ್ಕಳು ಕುಳಿತು ಪಾಠ ಕೇಳುತ್ತಿದ್ದಾರೆ.ಇದು ಮಕ್ಕಳ ಸುರಕ್ಷತೆಯನ್ನು ಪ್ರಶ್ನೆ ಮಾಡಲು ಬಯಸಿದೆ.
2016 ರಲ್ಲಿ, ಮಧುಗಿರಿ ತಾಲ್ಲೂಕಿನ ಸರ್ಕಾರಿ ಶಾಲೆ ಕಟ್ಟಡದ ಮೇಲ್ಛಾವಣಿ ಕುಸಿದ ಕಾರಣ ನಾಲ್ಕು ಮಕ್ಕಳಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಇನ್ನೂ 15 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
SCROLL FOR NEXT