ಬೆಂಗಳೂರು: ಕ್ಲಬ್ ನಲ್ಲಿ ಹೆಚ್ಚಿನ ಶಬ್ದದೊಂದಿಗೆ ಮ್ಯೂಸಿಕ್ ಹಾಕಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಲ್ ಟಿ-20 ತಂಡದ ಮಾಲೀಕನನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಟಸ್ಕರ್ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ ಪುಲಕೇಶಿ ನಗರ ನಿವಾಸಿಯಾಗಿದ್ದು, ಕುಂಡಲಹಳ್ಳಿಯಲ್ಲಿರುವ ಇ ಜೋನ್ ಕ್ಲಬ್ ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಮಧ್ಯರಾತ್ರಿ 1 ಗಂಟೆಯಾದರೂ ಕ್ಲಬ್ ನಲ್ಲಿ ಜೋರಾಗಿ ಮ್ಯೂಸಿಕ್ ಹಾಕಲಾಗಿತ್ತು.
ಇದರಿಂದಾಗಿ ಅಕ್ಕಪಕ್ಕದ ನಿವಾಸಿಗಳು ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಖ್ಯಪೇದೆ ಆನಂದ್ ಮತ್ತು ಪೇದೆ ರಾಜುಗೌಡ ಕ್ಲಬ್ ಗೆ ಆಗಮಿಸಿ ಮ್ಯೂಸಿಕ್ ನಿಲ್ಲಿಸುವಂತೆ ಹೇಳಿದ್ದಾರೆ.
ಆದರೆ ಈ ವೇಳೆ ಪೊಲೀಸರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ, ಪೊಲೀಸರು ಹಿರಿಯ ಅಧಿಕಾರಿಳಿಗೆ ಮಾಹಿತಿ ನೀಡಿದ್ದಾರೆ, ಹಿರಿಯ ಪೊಲೀಸ್ ಆಧಿಕಾರಿಗಳು ರೆಡ್ಡಿ ವಿರುದ್ಧ ಕೇಸು ದಾಖಲಿಸಿದ್ದಾರೆ, ಸರ್ಕಾರಿ ಅದಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿ ಹಾಗೂ ಹಲ್ಲೆ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ, ಆತನನ್ನು ಆಗಸ್ಟ್ 25 ವರಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.