ಸ್ವಾತಂತ್ರ ದಿನ ವಿಶೇಷ: ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಸೇವಾ ಪದಕ
ಬೆಂಗಳೂರು: ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಪೋಲೀಸ್ ಸೇವೆಗೆ ನಿಡಲಾಗುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕದ 18 ಪೋಲೀಸ್ ಅಧಿಕಾರಿಗ?ಉ ಆಯ್ಕೆಯಾಗಿದ್ದಾರೆ.
ಈ ಬಾರಿಯ ಸ್ವಾತಂತ್ರ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ 942 ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ನೀಡಿ ಗೌರವಿಸಲಿದ್ದಾರೆ. ಪೊಲೀಸ್ ಶೌರ್ಯ ಪ್ರಶಸ್ತಿಗೆ 177 ಮಂದಿ; ವಿಶೇಷ ಸೇವೆಗೆ 88 ಮಂದಿ; ಹಾಗೂ ಉತ್ತಮ ಸೇವೆಗೆ 675 ಪೊಲೀಸ್ ಸಿಬ್ಬಂದಿಗಳು ರಾಷ್ಟ್ರಪತಿಗಳಿಂದ ಸನ್ಮಾನಿತರಾಗಲಿದ್ದಾರೆ.
ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿರುವ ಡಿವೈಎಸ್‍ಪಿ ಟಿ. ರಂಗಪ್ಪ ಸೇರಿ 11 ಡಿವೈಎಸ್ಪಿಗಳು ಮತ್ತು ಇತರೆ ಹಂತದ ಅಧಿಕಾರಿಗಳು ಸೇರಿದಂತೆ ಒಟ್ಟು 18 ಪೋಲೀಸ್ ಸಿಬ್ಬಂದಿಗೆ ಈ ಗೌರವ ಸಲ್ಲಲಿದೆ.
ರಾಷ್ಟ್ರಪತಿ ಪದಕ ಗಳಿಸಿರುವ ರಾಜ್ಯ ಪೋಲೀಸರ ಪಟ್ಟಿ ಹೀಗಿದೆ-
- ಟಿ. ಸುಂದರರಾಜು- ಉಪಕಮಾಂಡೆಂಟ್, ಕೆಎಸ್‍ಆರ್‍ಪಿ ತುಮಕೂರು
- ಎಂ.ಎನ್. ಕರಿಬಸವನಗೌಡ – ಎಸಿಪಿ, ಮೈಕ್ರೋಲೇಔಟ್ ಉಪವಿಭಾಗ, ಬೆಂಗಳೂರು
- ಸಿ.ಗೋಪಾಲ್-ಎಸಿಪಿ, ಎನ್.ಆರ್. ಉಪವಿಭಾಗ, ಮೈಸೂರು
- ಕೆ.ಪುರುಷೋತ್ತಮ್- ಡಿವೈಎಸ್‍ಪಿ, ಸಿಐಡಿ, ಬೆಂಗಳೂರು
- ಟಿ.ರಂಗಪ್ಪ- ಡಿವೈಎಸ್‍ಪಿ, ಎಸ್‍ಐಟಿ, ಬೆಂಗಳೂರು ನಗರ
- ಟಿ.ಕೋದಂಡರಾಮಯ್ಯ- ಡಿವೈಎಸ್‍ಪಿ, ಎಸಿಬಿ, ಬೆಂಗಳೂರು
- ಉಮೇಶ್ ಗಣಪತಿ ಶೇಟ್-ಡಿವೈಎಸ್‍ಪಿ, ಎಸಿಬಿ, ಮೈಸೂರು
- ರುದ್ರಪ್ಪ ಎಸ್.ಉಜ್ಜನಕೊಪ್ಪ- ಡಿವೈಎಸ್‍ಪಿ, ಎಸಿಬಿ, ಕೊಪ್ಪಳ
- ಮಂಜುನಾಥ ಕೆ.ಗಂಗಲ್, ಡಿವೈಎಸ್‍ಪಿ, ದಾವಣಗೆರೆ ಗ್ರಾಮಾಂತರ
- ಎಂ.ಬಾಬು, ಡಿವೈಎಸ್‍ಪಿ,( ಸಿಟಿ ಎಸ್‍ಪಿ) ದಾವಣಗೆರೆ ನಗರ
- ಸದಾನಂದ ಎ. ತಿಪ್ಪಣ್ಣನವರ್- ಡಿವೈಎಸ್‍ಪಿ, ಅರಸೀಕೆರೆ ಉಪವಿಭಾಗ, ಹಾಸನ
- ಸುಧೀರ್ ಎಸ್.ಶೆಟ್ಟಿ- ಪೊಲೀಸ್ ಇನ್ಸ್‍ಪೆಕ್ಟರ್ , ಸಿಐಡಿ, ಬೆಂಗಳೂರು
- ಸೋಮಶೇಖರ್.ಎನ್- ಪೊಲೀಸ್ ಇನ್ಸ್‍ಪೆಕ್ಟರ್, (ಎಫ್‍ಪಿಆರ್) ಕೋಲಾರ
- ಟಿ.ಎನ್. ನಾಗಭೂಷಣ್, ಎಎಸ್‍ಐ, ಸಿಐಡಿ, ಬೆಂಗಳೂರು
- ಸಿ.ಕೋಮಲಾಚಾರ್, ಎಎಸ್‍ಐ, ರಾಣೆಬೆನ್ನೂರು, ಹಾವೇರಿ
- ಎಚ್.ಎಂ.ಪಾಪಣ್ಣ- ಎಆರ್‍ಎಸ್‍ಐ, ಕೆಎಸ್‍ಆರ್‍ಪಿ
- ಸಿದ್ದಲಿಂಗೇಶ್ವರ – ಹೆಡ್ ಕಾನ್ಸ್‍ಸ್ಟೇಬಲ್, ವಿದ್ಯಾರಣ್ಯಪುರ, ಬೆಂಗಳೂರು,
- ಶಿವಪ್ಪ ಮಲ್ಲಿಕಜಪ್ಪಬಿಳಿಗಿ, ಹೆಡ್ ಕಾನ್ಸ್‍ಸ್ಟೇಬಲ್, 5ನೆ ಬೆಟಾಲಿಯನ್, ಕೆಎಸ್‍ಆರ್‍ಪಿ, ಮೈಸೂರು