ರಾಜ್ಯ

ಹೊಸ ಕೃಷಿ ಸಾಲಕ್ಕಾಗಿ ನಬಾರ್ಡ್ ಕದ ತಟ್ಟಿದ ಕರ್ನಾಟಕ ಸರ್ಕಾರ

Srinivas Rao BV
ಬೆಂಗಳೂರು: 
ಕೃಷಿ ಸಾಲ ಮನ್ನಾ ಮಾಡುವ ಭರವಸೆ ಈಡೇರಿಸಲು ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಹರಸಾಹಸ ಮಾಡುತ್ತಿರುವ ರಾಜ್ಯ ಸರ್ಕಾರ ಈಗ ಹೊಸ ಕೃಷಿ ಸಾಲಕ್ಕಾಗಿ ನಬಾರ್ಡ್ ನ ನೆರವು ಕೇಳಲು ಮುಂದಾಗಿದೆ. 
ಸಹಕಾರ ಸಚಿವ ಬಂಡೆಪ್ಪ ಕಾಶೆಂಪೋರ್ ಈ ಕುರಿತು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ನಬಾರ್ಡ್ ಗೆ ಅಗತ್ಯವಿರುವ ಸೂಚನೆಗಳನ್ನು ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.  ಪ್ರಸ್ತುತ ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್ ಗಳಿಗೆ  ನಬಾರ್ಡ್ ಶೇ.40 ರಷ್ಟು ಅನುದಾನ ನೀಡುತ್ತಿದ್ದು, ರಾಜ್ಯದ 28 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಂಡಿದ್ದರೆ, 22 ಲಕ್ಷ ರೈತರು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಂಡಿದ್ದಾರೆ. 
ಈ ವರೆಗೂ ಯಾವುದೇ ಸಾಲ ತೆಗೆದುಕೊಳ್ಳದ 28 ಲಕ್ಷ ರೈತರಿಗೆ ನಾವು ನಬಾರ್ಡ್ ನ ಸಹಾಯದಿಂದ ಸಾಲ ನೀಡಬೇಕಿದೆ, ಆದ್ದರಿಂದ ಅನುದಾನವನ್ನು ಶೇ.75 ಕ್ಕೆ ಹೆಚ್ಚಿಸಬೇಕೆಂದು ಸಹಕಾರ ಸಚಿವರು ಮನವಿ ಮಾಡಿದ್ದಾರೆ. 
SCROLL FOR NEXT