ದರ್ಶನ್‌ ಅಭಿಮಾನಿಗಳ ಮೇಲೆ ಲಘು ಲಾಠಿ ಚಾರ್ಜ್ 
ರಾಜ್ಯ

ರಾಮನಗರದಲ್ಲಿ ದರ್ಶನ್‌ ಅಭಿಮಾನಿಗಳ ಮೇಲೆ ಲಘು ಲಾಠಿ ಚಾರ್ಜ್

ರಾಮನಗರದಲ್ಲಿ ನೂತನ ಆಭರಣ ಮಳಿಗೆ ಉದ್ಘಾಟನೆಗೆ ಆಗಮಿಸಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು...

ರಾಮನಗರ: ರಾಮನಗರದಲ್ಲಿ ನೂತನ ಆಭರಣ ಮಳಿಗೆ ಉದ್ಘಾಟನೆಗೆ ಆಗಮಿಸಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ನೋಡಲು ನೂರಾರು ಅಭಿಮಾನಿಗಳು ಮುಗಿಬಿದ್ದ ಪರಿಣಾಮ ನೂಕು ನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಬುಧವಾರ ನಡೆದಿದೆ. 
ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಎಂ.ಎಸ್. ಗೋಲ್ಡ್ ಆಂಡ್ ಡೈಮಂಡ್ ಮಳಿಗೆ ಉದ್ಘಾಟನೆ ಆಗಮಿಸಿದ್ದ ದರ್ಶನ್‌ ನೋಡಲೆಂದು ನೂರಾರು ಜನ ಜಮಾವಣೆಗೊಂಡಿದ್ದರು. ಇದರಿಂದ ಹೆದ್ದಾರಿಯಲ್ಲಿ ಸಂಚಾರವೂ ಅಸ್ತವ್ಯಸ್ತಗೊಂಡಿತ್ತು. 
ದರ್ಶನ್‌ ನೋಡುತ್ತಿದ್ದಂತೆ ಜನರು ಮುಗಿ ಬಿದ್ದಿದ್ದು, ಪೊಲೀಸರು ನಿಯಂತ್ರಿಸಲು ಸಾಧ್ಯವಾಗದೆ ಲಘು ಲಾಠಿ ಪ್ರಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. 
ಇನ್ನು ಮಳೆಗೆ ಉದ್ಘಾಟನೆ ಸಮಾರಂಭದಲ್ಲಿ ಗಾಯಕರು ಪರಭಾಷಾ ಹಾಡುಗಳನ್ನು  ಹಾಡುತ್ತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಯೊಬ್ಬ, ದರ್ಶನ್‌ ಅಭಿನಯದ ಚಿತ್ರಗಳ ಹಾಡನ್ನು ಹಾಡುವಂತೆ  ನೀರಿನ ಬಾಟಲ್‌ ಎಸೆದಿದ್ದು, ಅದು ವಿದ್ಯುತ್‌ ಕಂಬಕ್ಕೆ ತಗುಲಿ ಟ್ಯೂಬ್‌ಲೈಟ್‌ ಪುಡಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

Israeli strikes: ಗಾಜಾದಲ್ಲಿ ನಿಲ್ಲದ ಇಸ್ರೇಲ್ ವೈಮಾನಿಕ ದಾಳಿ; 52 ಜನರ ಹತ್ಯೆ!

SCROLL FOR NEXT