ರಾಜ್ಯ

ಖಾಸಗಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಸೀಟುಗಳು ಈಗ ಮಾರಾಟಕ್ಕೆ

Sumana Upadhyaya

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಲವು ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಸೀಟುಗಳನ್ನು ಮಾರಾಟ ಮಾಡಿದಂತೆ ಕಂಡುಬರುತ್ತಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಂಜಿನಿಯರಿಂಗ್ ಪದವಿ ಕಾಲೇಜುಗಳ ಪ್ರವೇಶಕ್ಕೆ ಆಗಸ್ಟ್ 15ರಂದು ಕೊನೆಯ ದಿನವಾಗಿದ್ದರಿಂದ ಕೆಲವು ಕಾಲೇಜುಗಳು ಅಕ್ಷರಶಃ ಎಂಜಿನಿಯರಿಂಗ್ ಸೀಟನ್ನು ಮಾರಾಟಕ್ಕಿಟ್ಟಂತೆ ಕಂಡುಬರುತ್ತಿದ್ದವು. ಮ್ಯಾನೇಜ್ ಮೆಂಟ್ ಖೋಟಾದ ಸೀಟುಗಳನ್ನು ಸರ್ಕಾರಿ ಶುಲ್ಕದಲ್ಲಿ ನೀಡುತ್ತಿದ್ದುದು ಕಂಡುಬಂತು.

ಸೀಟುಗಳನ್ನು ಖಾಲಿಯಿಡುವ ಬದಲಿಗೆ ಕಡಿಮೆ ಶುಲ್ಕದಲ್ಲಿ ನೀಡುವುದು ಉತ್ತಮ ಎಂದು ಕಾಲೇಜಿನ ವ್ಯವಸ್ಥಾಪಕರು ಹೇಳುತ್ತಿದ್ದರು. ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ನಿನ್ನೆ ಕಡೆಯ ದಿನವಾಗಿದ್ದರಿಂದ ಖಾಲಿ ಇರುವ ಸೀಟುಗಳನ್ನು ಸರ್ಕಾರಿ ಶುಲ್ಕದಲ್ಲಿ ನೀಡಲು ನಿರ್ಧರಿಸಿದೆವು. ಮ್ಯಾನೇಜ್ ಮೆಂಟ್ ಖೋಟಾದಲ್ಲಿ ಸೀಟು ಕೇಳಿಕೊಂಡು ಬಂದ ವಿದ್ಯಾರ್ಥಿಗಳ ಪಟ್ಟಿ ನಮ್ಮಲ್ಲಿತ್ತು. ಅಂತವರನ್ನು ವೈಯಕ್ತಿಕವಾಗಿ ಕರೆದು ಖಾಲಿ ಸೀಟುಗಳನ್ನು ಸಿಇಟಿ ಶುಲ್ಕದಡಿ ನೀಡಿದೆವು ಎನ್ನುತ್ತಾರೆ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವ್ಯವಸ್ಥಾಪಕ ಪ್ರತಿನಿಧಿಯೊಬ್ಬರು.

ನಾವು ಸೀಟುಗಳನ್ನು ಖಾಲಿ ಉಳಿಸಿಕೊಂಡರೆ ಅದು ನಿರುಪಯೋಗವಾಗುತ್ತದೆ. ಹೀಗಾಗಿ ಅಗತ್ಯವಿರುವವರಿಗೆ ನೀಡಲು ನಿರ್ಧರಿಸಿದೆವು. ಶಿಕ್ಷಣ ಸಂಸ್ಥೆಗೆ ಇದರಿಂದ ಹಣಕಾಸು ಹೊರೆ ಬೀಳುತ್ತದೆ. ಆದರೆ ಅವುಗಳನ್ನು ಖಾಲಿ ಬಿಡುವುದು ಇನ್ನು ಕೂಡ ಹಣಕಾಸಿನ ಹೊರೆಯಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು.

ತಮ್ಮ ಇಷ್ಟದ ಕೋರ್ಸ್ ನಲ್ಲಿ ಪ್ರವೇಶ ಸಿಗದ ವಿದ್ಯಾರ್ಥಿಗಳು ಸಿಕ್ಕಿದ ಕೋರ್ಸ್ ಗೆ ಪ್ರವೇಶ ಪಡೆದಿದ್ದು ಕಂಡುಬಂತು. ಒಂದು ವರ್ಷ ಕಳೆದ ನಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ಕೋರ್ಸ್ ನ್ನು ಬದಲಿಸಬಹುದು ಎಂದು ನಾನು ಸಿಕ್ಕಿರುವ ಕೋರ್ಸ್ ಗೆ ಪ್ರವೇಶ ಪಡೆದಿದ್ದೇನೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಂಕಿಅಂಶ ಪ್ರಕಾರ, 20 ಸಾವಿರಕ್ಕೂ ಹೆಚ್ಚು ಸೀಟುಗಳು ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಖೋಟಾದಡಿ ಖಾಲಿ ಉಳಿದಿವೆ. ಇನ್ನು ಕೆಲವು ಸರ್ಕಾರಿ ಕಾಲೇಜಿನಲ್ಲಿವೆ. ಕಳೆದ ವರ್ಷಕ್ಕಿಂತ ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ಈ ವರ್ಷ ಖಾಲಿ ಉಳಿದಿವೆ.

ಇದೇ ಪರಿಸ್ಥಿತಿ ವೈದ್ಯಕೀಯ ಸೀಟುಗಳಿಗೆ ಸಹ ಬರಬಹುದು ಎಂದು ಅಂದಾಜಿಸಲಾಗಿದೆ.

SCROLL FOR NEXT