ರಾಜ್ಯ

ಗೌರಿ ಹಂತಕರಲ್ಲಿ ಐವರು ಶಂಕಿತರಿಂದ ಕಲಬುರ್ಗಿ ಹತ್ಯೆ: ಎಸ್ಐಟಿ

Raghavendra Adiga
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್  ಹತ್ಯೆಯನ್ನು ತನಿಖೆ ನಡೆಸುತ್ತಿರುವ ಎಸ್ಐಟಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಐದು ಶಂಕಿತರು ಸಾಹಿತಿ, ಸಂಶೋಧಕರಾಗಿದ್ದ ಎಂ.ಎಂ. ಕಲಬುರ್ಗಿ ಅವರ್ ಹತ್ಯೆಯಲ್ಲಿಯೂ ಭಾಗಿಗಳಾಗಿದ್ದಾರೆ ಎಂದಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ  ಹನ್ನೆರಡು ಮಂದಿ ಶಂಕಿತರನ್ನು ಬಂಧಿಸಲಾಗಿದೆ.
ಕಲಬುರ್ಗಿ ಆಗಸ್ಟ್ 30, 2015 ರಂದು ಧಾರವಾಡದ ತನ್ನ ಮನೆಯಲ್ಲೇ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು.ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ.
ವಿಶೇಷ ತನಿಖಾ ತಂಡವು ನಮಗೆ ಒದಗಿಸಿದ ನಿರ್ದಿಷ್ಟವಾದ ಮಾಹಿತಿಯನ್ನು ನಾವು ಪಡೆದಿದ್ದು ಅದನ್ನು ಹಂಚಿಕೊಳ್ಳಲು ಇದು ಸಕಾಲವಲ್ಲ..ಈ ಹಂತದಲ್ಲಿ ನಾವು ಎಷ್ಟು ಮಂದಿ ಕಲಬುರ್ಗಿ ಹತ್ಯೆಯಲ್ಲಿ ತೊಡಗಿದ್ದರೆಂದು  ಬಹಿರಂಗಪಡಿಸಲಾಗದು ಎಂದು ಐಜಿಪಿ, ಸಿಐಡಿ, ಕೆಎಸ್ಆರ್ ಚರಣ್ ರೆಡ್ಡಿ ಪಿಟಿಐಗೆ ತಿಳಿಸಿದ್ದಾರೆ.
ಕನಿಷ್ಟ ಐವರು ಶಂಕಿತರು ಕಲಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್ಐಟಿ ಮೂಲಗಳು ಹೇಳಿದವಾದರೂ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಶಾರ್ಪ್ ಶೂಟರ್ ಪರಶುರಾಮ್ ವಾಗ್ಮೋರೆ ಹಾಗೂ ಅಮೋಲ್ ಕಾಳೆ ಸೇರಿ ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿರುವ 12 ಶಂಕಿತರನ್ನು ಎಸ್ಐಟಿಯು  ಬಂಧಿಸಿದೆ.
ಎಡಪಂಥೀಯ ನಿಲುವು ಹೊಂದಿದ್ದಲ್ಲದೆ ನಕ್ಸಲರ ಬೆಂಬಲಕ್ಕೆ ನಿಂತಿದ್ದ ಗೌರಿ ಲಂಕೇಶ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಎದುರಿಗೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
SCROLL FOR NEXT