ಅಟಲ್ ಬಿಹಾರಿ ವಾಜಪೇಯಿ 
ರಾಜ್ಯ

ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತನ ಕುಟುಂಬಕ್ಕೆ ಗಾರ್ಡಿಯನ್: ಏಕ್, ದೋ ತೀನ್ ಹೇಳಿ ಜೋಗ್ ಫಾಲ್ಸ್ ಹತ್ತಿದ್ದರು ವಾಜಪೇಯಿ!

ವಾಜಪೇಯಿ ಸೋತಿದ್ದಕ್ಕಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಶಿವಮೊಗ್ಗ ಜನತೆ ಇನ್ನೂ ಮರೆತಿಲ್ಲ, ...

ಶಿವಮೊಗ್ಗ: 1984ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ  ಸೋಲು ಅನುಭವಿಸಿದ್ದರು,  ಈ ವೇಳೆ ವಾಜಪೇಯಿ ಸೋತಿದ್ದಕ್ಕಾಗಿ   ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಶಿವಮೊಗ್ಗ ಜನತೆ ಇನ್ನೂ ಮರೆತಿಲ್ಲ, 
ಆತ್ಮ ಹತ್ಯೆ ಮಾಡಿಕೊಂಡ ವಿಚಾರವನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ,ಎಚ್ ಶಂಕರಮೂರ್ತಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ತಿಳಿಸಿದ್ದರು,  ಆ ವೇಳೆ ಫೋನ್ ಕಟ್ ಮಾಡಿದರು, ಅರ್ಧಗಂಟೆ ನಂತರ ಫೋನ್ ಮಾಡಿದ ಅವರು, ತಾವು ಶಿವಮೊಗ್ಗಕ್ಕೆ ಬರುತ್ತಿರುವುದಾಗಿ ತಿಳಿಸಿದರು, ಮಾರನೇ ದಿನ ಶಿವಮೊಗ್ಗಕ್ಕೆ ಬಂದ ಅವರು ಮೃತ ವ್ಯಕ್ತಿ ಲಕ್ಷ್ಮಿ ನಾರಾಯಣನ ಗುಡಿಸಲಿಗೆ ಬಂದು ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು, 
ನಂತರ ದೆಹಲಿಗೆ ತೆರಳಿದ ಅವರು ಅಲ್ಲಿಂದ 25 ಸಾವಿರ ರು ಚೆಕ್ ಅನ್ನು ಲಕ್ಷ್ಮಿ ನಾರಾಯಣನ ಕುಟುಂಬಸ್ಥರಿಗೆ ನೀಡಿದರು, ಮತ್ತೆ ನನಗೆ ಕರೆ ಮಾಡಿ ನಾನು 25 ಸಾವಿರ ರು ಚೆಕ್ ಕಳುಹಿಸುತ್ತಿದ್ದೇನೆ, ಅದನ್ನು ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿ ಆತನ ತಂಗಿ ಮತ್ತು ತಮ್ಮನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಹೇಳಿದ್ದಾಗಿ ಶಂಕರಮೂರ್ತಿ ತಿಳಿಸಿದ್ದಾರೆ.
1968 ರಲ್ಲಿ ಶಿವಮೊಗ್ಗದಲ್ಲಿ ನಡೆದ ಜನಸಂಘ ಸಮಾವೇಶಕ್ಕೆ ವಾಜಪೇಯಿ ಆಗಮಿಸಿದ್ದರು. ಆ ವೇಳೆ ವಾಜಪೇಯಿ ಡಿ.ಎಚ್ ಶಂಕರ ಮೂರ್ತಿ ಮತ್ತು ಅವರ ಸಹೋದರ ಡಿ.ಎಚ್ ಸುಬ್ಬಣ್ಣ ಅವರ ಅವಿಭಕ್ತ ಕುಟುಂಬದೊಂದಿಗೆ ಇರುತ್ತಿದ್ದರು, 1968 ರಲ್ಲಿ ಶಿವಮೊಗ್ಗಕ್ಕೆ ಬಂದಾಗ ಜೋಗ್ ಫಾಲ್ಸ್  ವಾಜಪೇಯಿ ಭೇಟಿ ನೀಡಿದ್ದರು. ಏಕ್ ದೋ ತೀನ್ ಹೇಳಿಕೊಂಡು ಜೋಗ್ ಫಾಲ್ಸ್ ಏರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT