ಮಡಿಕೇರಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕರ್ನಾಟಕದ ಕಾಶ್ಮೀರ ಕೊಡಗು ಅಕ್ಷರಷಃ ಮುಳುಗಡೆಯಾಗಿದೆ.
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, 300ಕ್ಕೂ ಹೆಚ್ಚು ಜನ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ.
ಹಲವೆಡೆ ಭೂಕುಸಿತ ಉಂತಾಗಿದ್ದು ಮೈಸೂರು, ಮಂಗಳೂರು ಸೇರಿ ಹೊರ ಜಿಲ್ಲೆಗಳಿಂದ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರು ತಮ್ಮ ರಕ್ಷಣೆಗಾಗಿ ಯಾಚಿಸುತ್ತಿದ್ದು ಅವರು ಅಥವಾ ಅವರ ಸಂಬಂಧಿಕರು ನೆರವಿಗಾಗಿ ಸಂಪರ್ಕಿಸಬಹುದಾದ ಸಂಪರ್ಕ ಸಂಖ್ಯೆಗಳು ಇಲ್ಲಿದೆ.