ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿ: ಹಂಪಿ ಸ್ಮಾರಕ ಜಲಾವೃತ
ಬಳ್ಳಾರಿ: ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಈ ಹಿನ್ನಲೆಯಲ್ಲಿ ವಿಶ್ವವಿಖ್ಯಾತ ಹಂಪಿಯ ಸಾಕಷ್ಟು ಸ್ಮಾರಕಗಳು ಜಲಾವೃತಗೊಂಡಿವೆ.
ಸ್ಮಾರಕಗಳ ಬಳಿ ಜಲಾವೃತಗೊಂಡಿದ್ದರೂ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಮಾತ್ರ ಯಾವುದೇ ರೀತಿಯ ವ್ಯತ್ಯಾಸಗಳಾಗಿಲ್ಲ. ಹಂಪಿಗೆ ಆಗಮಿಸುತ್ತಿರುವ ಪ್ರವಾಸಿಕರು ಜವಾವೃತಗೊಂಡಿರುವ ಸ್ಮಾರಕನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಂಪಿಯ ಕೋದಂಡರಾಮ ದೇಗುಲ, ಪುರಂದರ ಮಂಟಪಕ್ಕೆ ನೀರು ನುಗ್ಗಿದೆ. ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಭದ್ರಾ ನೀರಿನ ಮಟ್ಟ ಏರಿಕೆಯಾಗಿದೆ. ಜಲಾಶಯದಿಂದ 1,50,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇತ್ತೀಚಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ, ಜಲಾಶಯದಿಂದ ಇಷ್ಟು ಮಟ್ಟಿನ ನೀರನ್ನು ಇದೇ ಮೊದಲು ಬಿಡುಗಡೆ ಮಾಡಲಾಗಿದೆ. 2008ರಲ್ಲಿ 60,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿತ್ತು. ಕಳೆದ ಭಾನುವಾರ 1,90,000ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ 1,50,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
ನದಿ ತುಂಬಿ ಹರಿಯುತ್ತಿರುವುದರಿಂದ ಹಂಪಿಯ ದೇಗುಲದೊಳಗೆ ನೀರು ನುಗ್ಗಿದ್ದು, ಸ್ಮಾರಕಗಳ ಸುತ್ತಲೂ ಜಲಾವೃತಗೊಂಡಿದೆ. ಜಲಾವೃತಗೊಂಡಿರುವ ಸ್ಮಾರಕಗಳನ್ನು ನೋಡಲು ಜನರು ಹರಿದು ಬರುತ್ತಿದ್ದಾರೆ.
ಸ್ಮಾರಕಗಳ ಬಳಿ ಪವಿತ್ರ ತುಂಗಭದ್ರಾ ನದಿಯ ನೀರು ಬಂದು ನಿಂತಿದೆ. ನೀರಿಲ್ಲದೆ ಬವಣಿಸುತ್ತಿದ್ದ ಜನರಿಗೆ ದೇರು ನೀರು ಕೊಟ್ಟಿದ್ದು, ದೇವರಿಗೆ ಧನ್ಯವಾದಗಳನ್ನು ಹೇಳಬೇಕು ಎಂದು ಕಮಲಾಪುರದ ಸ್ಥಳೀಯ ಶರಣ ಬಸಯ್ಯ ಅವರು ಹೇಳಿದ್ದಾರೆ.
ವಾರಾಂತ್ಯದಲ್ಲಿ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವೇಳೆ ಯಾವುದೇ ರೀತಿಯ ಅಹಿಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸ್ಥಳದಲ್ಲಿ ಜೀವರಕ್ಷಕ ದಳಗಳಿರಬೇಕು. ಅಪಾಯಕರ ಸ್ಥಳಗಳಿಗೆ ಜನರು ಹೋಗದಂತೆ ನೋಡಿಕೊಳ್ಳುವಂತೆ ಸೂಚನೆ ಗಳನ್ನು ನೀಡಲಾಗಿದೆ ಎಂದು ಉಪ ಆಯುಕ್ತ ರಾಮ್ ಪ್ರಶಾಂತ್ ಮನೋಹರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos