ಸಾಂದರ್ಭಿಕ ಚಿತ್ರ 
ರಾಜ್ಯ

ರೈತರ ಸಹಕಾರಿ ಬ್ಯಾಂಕ್ ಸಾಲ ಮನ್ನಾಗೆ ಕುಟುಂಬ ಸದಸ್ಯರ ಮಿತಿ ತೆಗೆದುಹಾಕಿದ ಸರ್ಕಾರ

ಸಹಕಾರಿ ಸಂಘ ಸಂಸ್ಥೆಗಳಿಂದ ಸಾಲ ಪಡೆದುಕೊಂಡ ರೈತರಿಗೆ ಖುಷಿಯ ವಿಚಾರವಿದು. ರೈತರ ಸಾಲಮನ್ನಾಗೆ...

ಬೆಂಗಳೂರು: ಸಹಕಾರಿ ಸಂಘ ಸಂಸ್ಥೆಗಳಿಂದ ಸಾಲ ಪಡೆದುಕೊಂಡ ರೈತರಿಗೆ ಖುಷಿಯ ವಿಚಾರವಿದು. ರೈತರ ಸಾಲಮನ್ನಾಗೆ ಸರ್ಕಾರ ವಿಧಿಸಿದ್ದ ಒಂದು ಕುಟುಂಬ, ಒಂದು ಸಾಲ ಷರತ್ತನ್ನು ತೆಗೆದುಹಾಕಿದೆ. ಪರಿಷ್ಕೃತ ಆದೇಶವನ್ನು ಸರ್ಕಾರ ಇನ್ನು ಕೆಲ ದಿನಗಳಲ್ಲಿ ಹೊರಡಿಸಲಿದೆ ಎಂದು ಸಹಕಾರ ಖಾತೆ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ಕಳೆದ ವಾರ ನಡೆಸಿದ ಸಭೆಯಲ್ಲಿ, ರೈತರ ಸಾಲಮನ್ನಾಗೆ ಕುಟುಂಬವನ್ನು ಒಂದು ಘಟಕವೆಂದು ಪರಿಗಣಿಸಬೇಕೆಂದು ನಿರ್ಧರಿಸಲಾಯಿತು. ಕುಟುಂಬದಲ್ಲಿ ಎಷ್ಟು ಮಂದಿಯ ಹೆಸರಲ್ಲಿ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದುಕೊಂಡರೂ ಸಹ 1 ಲಕ್ಷದವರೆಗೆ ರೈತ ಸಾಲಮನ್ನಾವನ್ನು ಮನ್ನಾ ಮಾಡಲು ನಿರ್ಧರಿಸಲಾಯಿತು.

ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸ್ ಅವರ 103ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿದ ಸಚಿವ ಬಂಡೆಪ್ಪ ವಾಣಿಜ್ಯ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲ ಎಷ್ಟು ಪ್ರಮಾಣದಲ್ಲಿ ಮನ್ನಾ ಆಗಲಿದೆ ಎಂದು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

SCROLL FOR NEXT