ರಾಜ್ಯ

ಬೆಂಗಳೂರು: ಐದರ ಬಾಲಕಿಗೆ ಲೈಂಗಿಕ ಕಿರಿಕುಳ, ಕ್ಷೌರಿಕನ ಬಂಧನ

Raghavendra Adiga
ಬೆಂಗಳೂರು: ತನ್ನ ಮನೆಯಲ್ಲಿ ಐದರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕ್ಷೌರಿಕನೊಬ್ಬನನ್ನು ಬೆಂಗಳೂರು ಬಸವೇಶ್ವರನಗರ ಪೋಲೀಸರು ಬಂಧಿಸಿದ್ದಾರೆ. 
ಆರೋಪಿಯನ್ನು ಕಮಲಾನಗರ ನಿವಾಸಿ ಭಾಸ್ಕರ್ ವಿ (37) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ ಎಂದ್ಯು ಪೋಳೀಸರು ಹೇಳಿದ್ದಾರೆ.
ಕ್ಷೌರಿಕನೊಬ್ಬನೇ ಮನೆಯಲ್ಲಿದ್ದ ವೇಳೆ ಚಾಕಲೇಟ್ ಖರೀದಿಸಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಬಾಲಕಿ ಕ್ಷೌರಿಕನ ಮನೆಯಿಂದ ಹೊರಗೋಡಿ ಬಂದಿದ್ದು ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಆ ವೇಳೆ ಬಾಲಕಿಯ ತಾಯಿ ಆಗಮಿಸಿ ಮಗಳ ಸ್ಥಿತಿ ಅರಿತವರೇ ಪೋಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ದೂರಿತ್ತಿದ್ದಾರೆ. 
ಬಸವಏಶ್ವರನಗರ ಪೋಲೀಸರು ಪೋಸ್ಕೋ ಕಾಯ್ದೆಯಡಿ ಕ್ಷೌರಿಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
SCROLL FOR NEXT