ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ವಿಮಾನ ನಿಲ್ದಾಣಕ್ಕೆ ಮತ್ತೆ ಹುಸಿ ಬಾಂಬ್ ಕರೆ: ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದ ದುಷ್ಕರ್ಮಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಷ್ಕರ್ಮಿಯೊಬ್ಬ ಪದೇ ಪದೇ ಹುಸಿ ಬಾಂಬ್ ಮಾಡುತ್ತಿದ್ದು, ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಒಂದು ಅಧಿಕಾರಿಗಳಿಗೆ ಸವಾಲು ಹಾಕಿದ್ದಾನೆ...

ಸಂಗ್ರಹ ಚಿತ್ರ
Manjula VN
Updated On : 28 Aug 2018, 11:42 am
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಷ್ಕರ್ಮಿಯೊಬ್ಬ ಪದೇ ಪದೇ ಹುಸಿ ಬಾಂಬ್ ಮಾಡುತ್ತಿದ್ದು, ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಒಂದು ಅಧಿಕಾರಿಗಳಿಗೆ ಸವಾಲು ಹಾಕಿದ್ದಾನೆ. 
ನಿನ್ನೆ ಕೂಡ ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ಕರೆ ಮಾಡಿರುವ ಕಿಡಿಗೇಡಿ, ನಿಲ್ದಾಣದಲ್ಲಿ ಬಾಂಬ್ ಇರುವುದಾಗಿ ತಿಳಿಸಿ, ಆತಂಕ ಸೃಷ್ಟಿ ಮಾಡಿದ್ದಾನೆ. 
ಕಿಡಿಗೇಡಿ ಪತ್ತೆಗೆ ಕುಂದಾಪುರ ಹಾಗೂ ಮೈಸೂರಿನಲ್ಲಿ ಜಾಲಾಡಿ ಮರಳಿದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು, ಇದೀಗ ಬೆಂಗಳೂರುನಗರದಲ್ಲಿ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ. 

Advertisement

Advertisement

ಆ.20 ರಂದುಏರ್ ಏಷ್ಯಾ ವೈಮಾನಿಕ ಸಂಸ್ಥೆಯ ವ್ಯವಸ್ಥಾಪಕ ಡ್ಯೂಟಿ ಮೊಬೈಲ್'ಗೆ ಕರೆ ಮಾಡಿರುವ ಆರೋಪಿ, ನಿಮ್ಮ ವಿಮಾನದಲ್ಲಿ ಬಾಂಬ್ ಸ್ಫೋಟವಾಗಲಿದೆ ಎಂದು ಹೇಳಿದ್ದಾರೆ. 
ಈ ವೇಳೆ ಪರಿಶೀಲನೆ ನಡೆಸಿದಾಗ ಅದು ಹುಸಿ ಬಾಂಬ್ ಕರೆ ಎಂಬುದು ತಿಳಿದಿದೆ. ಮತ್ತೆ ಸೋಮವಾರ ಆ ವ್ಯವಸ್ಥಾಪಕರಿಗೇ ಅದೇ ಮೊಬೈಲ್ ಸಂಖ್ಯೆಯಿಂದ ಹುಸಿ ಕರೆ ಬಂದಿದೆ. 
ಕೆಎಐನಿಂದ 1.08ರ ಸಮಯಕ್ಕೆ ಕೊಯಮತ್ತೂರಿಗೆ ತೆರಳುವ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಆರೋಪಿ ಹೇಳಿ ಕರೆ ಸ್ಥಗಿತಗೊಳಿಸಿದ್ದ.
ಈ ಕರೆ ಹಿನ್ನಲೆಯಲ್ಲಿ ಕೆಲ ಹೊತ್ತು ವಿಮಾನ ನಿಲ್ದಾಣದಲ್ಲಿ ಆಂತಕ ಮನೆ ಮಾಡಿತ್ತು. ಕೊನೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಪೊಲೀಸ್, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಪರಿಶೀಲಿಸಿ ಇದೊಂದು ಹುಸಿ ಕರೆ ಎಂದು ಘೋಷಿಸಿದ ಬಳಿಕ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ತಿಳಿಯಾಯಿತು. 
ಹುಸಿ ಬಾಂಬ್ ಕರೆಗಳನ್ನು ಗಂಭೀರವಾಗಿ ಪರಿಗಣಿಸಿದ ವಿಮಾನ ನಿಲ್ದಾಣ ಠಾಣೆ ಪೊಲೀಸು, ಏರ್ ಏಷ್ಯಾ ಏರ್ವೇಸ್ ವ್ಯವಸ್ಥಾಪಕರ ಮೊಬೈಲ್ಗೆ ಕರೆ ಬಂದಿದ್ದ ಕರೆ ಆಧರಿಸಿ ತನಿಖೆ ನಡೆಸಿದರು. ಆಗ ವ್ಯವಸ್ಥಾಪಕರಿಗೆ ಕರೆ ಬಂದಿದ್ದ ಮೊಬೈಲ್ ಸಂಖ್ಯೆಯ ಸಿಮ್ ಕುಂದಾಪುರ ತಾಲೂಕಿನ ಶಿವಳ್ಳಿ ಗ್ರಾಮದ ಆದಿತ್ಯ ರಾವ್ ಎಂಬುವವರ ಹೆಸರಿನಲ್ಲಿತ್ತು. 
ಈ ಮಾಹಿತಿ ಆಧರಿಸಿ ಕುಂದಾಪುರಕ್ಕೆ ತೆರಳಿದ ಪೊಲೀಸರು, ಅಲ್ಲಿ ವಿಚಾರಿಸಿದಾಗ ಶಂಕಿತ ಆರೋಪಿ 6 ತಿಂಗಳ ಹಿಂದೆಯೇ ಊರು ತೊರೆದಿರುವ ಸಂಗತಿ ಗೊತ್ತಾಗಿದೆ. 
ನಂತರ ಟವರ್ ಲೊಕೇಷನ್ ನೋಡಿದಾಗ ಆತನ ಮೊಬೈಲ್ ಮೈಸೂರಿನಲ್ಲಿ ಸಂಪರ್ಕ ಪಡೆದಿರುವುದು ಗೊತ್ತಾಗಿದೆ. ಕೂಡಲೇ ಅಲ್ಲಿಗೆ ಪೊಲೀಸರು ತೆರಳಿದಾಗ ಅಲ್ಲೂ ಆತ ಪತ್ತೆಯಾಗಿಲ್ಲ. 
ಈ ಮಧ್ಯೆ ಸೋಮವಾರ ಮಧ್ಯಾಹ್ನ ಅದೇ ನಂಬರ್ ನಿಂದ ಕರೆ ಬಂದಿದೆ. ಅದರಂತೆ ಮೊಬೈಲ್ ಸಂಖ್ಯೆ ಟವರ್ ಲೊಕೇಷನ್ ನೋಡಿದಾಗ ಕೆ.ಆರ್.ಪುರ ಹಾಗೂ ರಾಮಮೂರ್ತಿನಗರದ ಕಡೆ ಆರೋಪಿ ಅಡಗಿರುವ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದೇವೆಂದು ಪೊಲೀಸರು ವಿವರಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement