ರಾಜ್ಯ

ಮೈಸೂರು ನಗರ ಪಾಲಿಕೆಗೆ ಸ್ಪರ್ಧಿಸುತ್ತಿರುವ ತೃತೀಯ ಲಿಂಗಿ ಚಾಂದಿನಿ

Sumana Upadhyaya

ಮೈಸೂರು: ಮೈಸೂರು ನಗರ ಪಾಲಿಕೆ ಚುನಾವಣೆ ನಾಳೆ ನಡೆಯಲಿದ್ದು 393 ಮಂದಿ ಸ್ಪರ್ಧಿಸುತ್ತಿದ್ದಾರೆ. ಅವರಲ್ಲೊಬ್ಬ ಸ್ಪರ್ಧಿ ವಿಶೇಷವಾಗಿದ್ದಾರೆ, ಅವರೇ ತೃತೀಯ ಲಿಂಗಿ ಚಾಂದಿನಿ.

ವಾರ್ಡ್ ನಂಬರ್ 27ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಚಾಂದಿನಿ ಅಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಎಸ್ ಡಿಪಿಐ ಮತ್ತು ಆಲ್ ಇಂಡಿಯಾ ನ್ಯೂ ಕಾಂಗ್ರೆಸ್ ಅಭ್ಯರ್ಥಿಗಳ ಎದುರು ಸ್ಪರ್ಧಿಸುತ್ತಿದ್ದಾರೆ.

ನೇರವಂತಿಕೆ ಈಕೆ ಮತದಾರರಿಗೆ ನೀಡುವ ಭರವಸೆ, ಸುಮಾರು 8 ಲಕ್ಷ ಜನಸಂಖ್ಯೆ ಇರುವ ಮೈಸೂರು ನಗರದಲ್ಲಿ 392 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅವರ ಜೊತೆ ನಾನೊಬ್ಬಳು 393ನೇ ಅಭ್ಯರ್ಥಿ, ಇಲ್ಲಿನ ಸಾವಿರ ತೃತೀಯ ಲಿಂಗಿಗಳು ಮತ್ತು ಲೈಂಗಿಕ ಕಾರ್ಯಕರ್ತರನ್ನು ಪ್ರತಿನಿಧಿಸುತ್ತಿದ್ದೇನೆ ಎಂದರು.

ಬಡ್ಡೆಮಕಾನ್ ಎಂಬ ಟಿಪ್ಪು ಸರ್ಕಲ್ ನಲ್ಲಿರುವ ಕೊಳಚೆ ಪ್ರದೇಶಗಳಿಂದ ಬಂದವರಾಗಿರುವ ಚಾಂದಿನಿ ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಕನಸು ಕೈಗೂಡಿರಲಿಲ್ಲ, ಏಕೆಂದರೆ ಆಗ ಅದು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿತ್ತು.

ಮುಂದಿನ ಚುನಾವಣೆಯಲ್ಲಿ ನೋಡೋಣ ಎಂದು ಹೇಳಿದ್ದ ಕಾರಣ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಬೇಕೆಂಬ ಚಾಂದಿನಿ ಕನಸು ಕೈಗೂಡಲಿಲ್ಲ. ಆದರೆ ಅವರು ಸ್ಪರ್ಧಿಸುವ ಹಠದಿಂದ ವಾರ್ಡ್ ಸಂಖ್ಯೆ 27ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ 10 ಸಾವಿರದ 569 ಮತದಾರರಿದ್ದಾರೆ.

ಕಳೆದ 15 ವರ್ಷಗಳಿಂದ ಚಾಂದಿನಿ ಸಾರ್ವಜನಿಕ ಜೀವನದಲ್ಲಿದ್ದಾರೆ. ಅನೇಕ ವೇದಿಕೆಗಳಲ್ಲಿ ತೃತೀಯ ಲಿಂಗಿಗಳು ಮತ್ತು ಲೈಂಗಿಕ ಕಾರ್ಯಕರ್ತರ ಬಗ್ಗೆ ಧ್ವನಿಯೆತ್ತಿದ್ದಾರೆ. ಕೊಳಚೆ ಪ್ರದೇಶದಲ್ಲಿರುವ ನಿರ್ಗತಿಕರಿಗೆ ಮನೆ ಒದಗಿಸುವುದು, ಸಮುದಾಯ ಭವನ ನಿರ್ಮಿಸುವುದು, ಅಂಗನವಾಡಿ ನಿರ್ಮಾಣ ಮತ್ತು ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು ತಮ್ಮ ಕನಸಾಗಿದೆ ಎಂದರು.

ಕಳೆದ 10 ದಿನಗಳಿಂದ ತಮ್ಮ ಪರ ಮಹಿಳಾ ಸ್ವಸಹಾಯ ಗುಂಪುಗಳು ಪ್ರಚಾರ ಮಾಡುತ್ತಿರುವುದು ನೋಡಿ ಚಾಂದಿನಿ ಖುಷಿಯಾಗಿದ್ದಾರೆ.

SCROLL FOR NEXT