ಬೆಂಗಳೂರು: ಕನ್ನಡ ಪುಸ್ತಕ ಪ್ರಿಯರಿಗೆ ಇಲ್ಲೊಂದು ಒಳ್ಳೆ ಸುದ್ದಿ ಇದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಪುಸ್ತಕ ಉದ್ಯಾನಗಳನ್ನು ಪ್ರಾರಂಭಿಸಲು ಯೋಜಿಸಿದೆ, ಅದರಲ್ಲಿ ಬೆಂಗಳೂರಿನಂತಹ ನಗರಗಳು ಸಹ ಸೇರಿದ್ದು ಇವುಗಳು ಪ್ರವಾಸಿ ಸ್ಥಳವಾಗಿ ಮಾರ್ಪಡಲಿದೆ.
ಇಲ್ಲಿ ನೀವುಗಳು ಅಲ್ಪ ಹಣ ಪಾವತಿಸಿ ಟಿಕೆಟ್ ಖರೀದಿಸಿದರೆ ಇಡೀ ದಿನ ನಿಮ್ಮಿಷ್ಟದ ಕನ್ನಡ ಪುಸ್ತಕ ಓದುತ್ತಾ, ಕಾಫಿ ಹೀರುತ್ತಾ ಕಾಲ ಕಳೆಯಲು ಅವಕಾಶವಿದೆ.
ಕನ್ನಡ ಪುಸ್ತಕ ಪ್ರಾಧಿಕಾರ (ಕೆಬಿಎ) ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ಸಮಯದಲ್ಲಿ ಬೆಂಗಳೂರಿನಲ್ಲಿ ಇಂತಹಾ ಬುಕ್ ಪಾರ್ಕ್ ಅನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ತಿರ್ಮಾನಿಸಲಾಗಿದೆ.
ಕೆಬಿಎ ಅಧ್ಯಕ್ಷೆ ಮತ್ತು ಹಿರಿಯ ಬರಹಗಾರ್ತಿಯಾದ ವಸುಂಧರಾ ಭೂಪತಿ ಮಾತನಾಡಿ ಬೆಂಗಳೂರಿನ ಕಲಾಗ್ರಾಮಾದಲ್ಲಿ ಬುಕ್ ಪಾರ್ಕ್ ಸ್ಥಾಪಿಸಲು ಸಲಹೆ ನಿಡಿರುವುದಾಗಿ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸ್ಮರಣಾಪತ್ರವನ್ನು ಸಚಿವೆ ಜಯಮಾಲಾ ಅವರಿಗೆ ಸಲ್ಲಿಸಿದ್ದು ಜಯಮಾಲಾ ಮೈಸೂರು ಹಾಗೂ ಧಾರವಾಡಗಳಲ್ಲಿ ಸಹ ಕೆಬಿಎ ಇಂತಹಾ ಪಾರ್ಕ್ ಸ್ಥಾಪಿಸಬೇಕೆಂದು ಸಲಹೆ ಮಾಡಿದ್ದಾರೆ.
"ಜರ್ಮನಿ ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಹಲವು ದೇಶಗಳಲ್ಲಿ ಬುಕ್ ಪಾರ್ಕ್ ಗಳು ಬಹಳ ಜನಪ್ರಿಯವಾಗಿವೆ. ನಾವು ಇದೇ ರೀತಿಯ ಪರಿಕಲ್ಪನೆಯನ್ನು ಇಲ್ಲಿ ತರಲು ಬಯಸುತ್ತೇವೆ ಮತ್ತು ಈ ಎಲೆಕ್ಟ್ರಾನಿಕ್ ಯುಗದಲ್ಲಿ ಜನರು ಹೆಚ್ಚು ಹೆಚ್ಚು ಪುಸ್ತಕದತ್ತ ಆಕರ್ಷಿತರಾಗುವುದನ್ನು ನಾವು ಬಯಸಿದೇವೆ." ವಸುಂಧರಾ ಭೂಪತಿ ಹೇಳಿದ್ದಾರೆ. ಈ ಬುಕ್ ಪಾರ್ಕ್ ಗಳಲ್ಲಿ ಹಳೆಯ, ಹೊಸ ಎಲ್ಲಾ ಬಗೆಯ ಪುಸ್ತಕಗಳು ಇರಲಿದೆ.
"ಪಾಶ್ಚಾತ್ಯ ದೇಶಗಳಲ್ಲಿ ಅಂತಹ ಪಾರ್ಕ್ಗಳುಹತ್ತು ಮಹಡಿಗಳಷ್ಟು ಎತ್ತರವಿರಲಿದೆ. ಪುಸ್ತಕಪ್ರೇಮಿಗಳು ಇಲ್ಲಿಂದ ಯಾವುದೇ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಹಸಿರು ವಾತಾವರಣದಲ್ಲಿ ಓದಬಹುದು.ಈ ಉದ್ಯಾನವನಗಳು ಸಣ್ಣ ವಸ್ತುಸಂಗ್ರಹಾಲಯವನ್ನೂ ಸಹ ಹೊಂದಿರಲಿದೆ, ಅಲ್ಲಿ ಅವರು ಹಿಂದಿನಿಂದ ಇಂದಿನವರೆಗೆ ಬೆಳೆದು ಬಂದ ಮುದ್ರಣ ತಂತ್ರಜ್ಞಾನದ ವಿಕಾಸವನ್ನು ಪ್ರದರ್ಶಿಸುವುದಕ್ಕೆ ನಿರ್ಧರಿಸಲಾಗಿದೆ" ಅವರು ಹೇಳಿದ್ದಾರೆ.
"ಪುಸ್ತಕಗಳು ನಮ್ಮ ಇತಿಹಾಸ, ಸಂಸ್ಕೃತಿಯ ಭಾಗಗಳಾಗಿದೆ" ಪುಸ್ತಕಗಳನ್ನು ಮಾರುವ ಹಲವಾರು ಮಳಿಗೆಗಳಿಗೆ ಸಹ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ"
ಪಾರ್ಕ್ ನ ಒಳಾಂಗಣಗಳನ್ನು ಪುಸ್ತಕಗಳಂತೆ ರಚಿಸುವ ಉದ್ದೇಅವಿದೆ.ಆಸನ ವ್ಯವಸ್ಥೆಗಳನ್ನು ಒಳಗೊಂಡಂತೆ ಎಲ್ಲವನ್ನು ನಿರ್ವಹಿಸಲಿದ್ದೇವೆ.ಜ್ಞಾನಪೀಠ ಪ್ರಶಸ್ತಿ ವಿಜೇತರು ಸೇರಿದಂತೆ ಪ್ರಸಿದ್ಧ ಕನ್ನಡ ಬರಹಗಾರರ ಪ್ರತಿಮೆ / ಚಿತ್ರಗಳು ಇಲ್ಲಿರಲಿದೆ.
ಸೆಮಿನಾರ್ ಹಾಲ್ ಇಲ್ಲಿರಲಿದ್ದು ಇಲ್ಲಿ ಲೇಖಕರು ತಮ್ಮ ಪುಸ್ತಕಗಳ ಬಿಡುಗಡೆ ಸಮಾರಂಭ ಸಹ ನಡೆಸಬಹುದಾಗಿದೆ.
"ನಾವು ನೆಪಮಾತ್ರಕ್ಕೆ ಟಿಕೆಟ್ ಶುಲ್ಕ ನಿಗದಿ ಪಡಿಸಲಿದ್ದು ಇದಕ್ಕೆ ಸಮಯದ ಪರಿಮಿತಿ ಇರುವುದಿಲ್ಲ:" ಓರ್ವ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos