ರಾಜ್ಯ

ಲಕ್ಕವಳ್ಳಿಯಲ್ಲಿ ಮುಂದುವರೆದ ಕಾಡಾನೆಗಳ ಸಾವಿನ ಸರಣಿ: ವಿದ್ಯುತ್ ಪ್ರವಹಿಸಿ ಗಂಡಾನೆ ಸಾವು

Manjula VN
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ವ್ಯಾಪ್ತಿಯ ತರೀಕೆರೆ ತಾಲಕಿನ ಲಕ್ಕವಳ್ಳಿಯಲ್ಲಿ ಕಾಡಾನೆಗಳ ಸಾವಿನ ಸರಣಿ ಮತ್ತೆ ಮುಂದುವರೆದಿದ್ದು, ವಿದ್ಯುತ್ ಪ್ರವಹಿಸಿ ಗಂಡಾನೆಯೊಂದು ಮೃತಪಟ್ಟಿದೆ. 
ಹರುವನಹಳ್ಳಿ ಬಳಿ ವಿದ್ಯುತ್ ಹರಿದು ಸುಮಾರು 25-30 ವರ್ಷದ ಪ್ರಾಯದ ಗಾಂಡಾನೆಯೊಂದು ಸಾವನ್ನಪ್ಪಿದೆ. ಇದರಂತೆ ಅರಣ್ಯ ಪ್ರದೇಶದಲ್ಲಿ ಈ ವಾರ ಒಟ್ಟು ನಾಲ್ಕು ಆನೆಗಳು ಸಾವನ್ನಪ್ಪಿದ್ದು, ಕಳೆದೆರಡು ವರ್ಷಗಳಿಂದ 15 ಆನೆಗಳು ಮೃತಪಟ್ಟಿವೆ ಎಂದು ವರದಿಗಳು ತಿಳಿಸಿವೆ. 
ಕಾಡು ಪ್ರಾಣಿಗಳಿಂದ ತಮ್ಮ ಕೃಷಿ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ರೈತರು ಅಕ್ರಮವಾಗಿ ಬೇಡಿಗಳನ್ನು ಹಾಕುತ್ತಿದ್ದು, ಇದರಿಂದಾಗಿ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಘಟನೆ ಸಂಬಂಧ ಪ್ರಾಣಿ ರಕ್ಷಣಾ ಕಾಯ್ದೆ ಅಡಿಯಲ್ಲಿ ಅಯ್ಯಪ್ಪ, ಮುರ್ಗ ಹಾಗೂ ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಆನೆ ಸಾವನ್ನಪ್ಪಿದ ಬಳಿಕ ಘಟನಾ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಆನೆಯ ಮರಣೋತ್ತರ ಪರೀಕ್ಷೆಯನ್ನು ಶನಿವಾರ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 
ಕಳೆದ ಎರಡು ವರ್ಷಗಳಿಂಗ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಕೊಡಗುವಿನಲ್ಲಿ ಒಟ್ಟು 19 ಆನೆಗಳು ವಿದ್ಯುತ್ ಹರಿದು ಸಾವನ್ನಪ್ಪಿವೆ. ಲಕ್ಕವಳ್ಳಿ ತನಿಗೆಬೈಲು, ಬಂಡೀಪುರ-ನಾಗರಹೊಳೆ, ವಿರಾಜಪೇಟೆ, ಹೆಚ್'ಡಿ ಕೋಟೆ ಹಾಗೂ ಸಿದ್ದಾಪುರದಲ್ಲಿ 15 ಆನೆಗಳು ಸಾವನ್ನಪ್ಪಿವೆ. 
SCROLL FOR NEXT