ರಾಜ್ಯ

ಬೆಂಗಳೂರಿನ ಈ ಹಾಸ್ಟೆಲ್ ವಾರ್ಡನ್ ಬಳಿ ಸಿಕ್ಕ ಅಕ್ರಮ ಆಸ್ತಿ ಬೆಲೆ ಗೊತ್ತಾ?

Raghavendra Adiga
ಬೆಂಗಳೂರು: ಬೆಂಗಳೂರಿನ ಹಾಸ್ಟೆಲ್ ವಾರ್ಡನ್ ಒಬ್ಬನ ಬಳಿ ಬರೋಬ್ಬರಿ 250 ಕೋಟಿ ರು. ಅಕ್ರಮ ಆಸ್ತಿ ಪತ್ತೆಯಾಗಿದ್ದು  ಇದೀಗ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಪೋಲೀಸರು ನ್ಯಾಯಾಲಯದ ಆದೇಶದ ಮೇರೆಗೆ ಎಫ್ ಐಆರ್ ದಾಖಲಿಸಿದ್ದಾರೆ.
ಕನಕಪುರ ಕೋಡಿಹಳ್ಳಿ ಹೋಬಳಿ ಹುಣಸನಹಳ್ಳಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಿರಿಯ ವಾರ್ಡನ್ ಬಿ. ನಟರಾಜ್ ವಿರುದ್ಧ ಎಫ್ ಐಆರ್ ದಾಖಲಾಗಿದೆ,.
ಹಾಸ್ಟೆಲ್ ನ ಕಿರಿಯ ವಾರ್ಡನ್ ಆಗಿರುವ ನಟರಾಜ್ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ದಾಖಲೆ ಸಹಿತವಾಗಿ ಕನಕಪುರ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಸಿಸಿಆರ್ ದಾಖಲಿಸಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ನ್ಯಾಯಾಲಯ ಎಸಿಬಿ ಪೋಲೀಸರಿಗೆ ಆದೇಶಿಸಿತ್ತು.
ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ನವೆಂಬರ್ 2ರಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ನಟರಾಜ್ 1995ರಲ್ಲಿ ಚೆನ್ನಪಟ್ಟಣ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಕಿರಿಯ ವಾರ್ಡನ್ ಆಗಿ ನೇಮಕವಾಗಿದ್ದರು.ದಿನಗೂಲಿ ಆಧಾರದಲ್ಲಿ ಮಾಸಿಕ 700 ರೂ. ವೇತನಕ್ಕೆ ಕೆಲಸಕ್ಕೆ ಸೇರಿದ್ದ ಇವರು ಬಳಿಕ ಕನಕಪುರಕ್ಕೆ ವರ್ಗಾವಣೆಯಾಗಿ ಖಾಯಂ ಉದ್ಯೋಗಿಯಾಗಿ ನೇಮಕವಾದರು.
ಇದೀಗ ನಟರಾಜ್ ತಮ್ಮ ಆದಾಯಕ್ಕೆ ಮೀರಿ ಆಸ್ತಿ ಗಳಿಸಿದ್ದಾರೆ ಎನ್ನಲಾಗಿದ್ದು ಬೆಂಗಳೂರು, ಕನಕಪುರ, ಹಾರೋಹಳ್ಳಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಇವರು ಅಕ್ರಮ ಆಸ್ತಿ ಹೊಂದಿದ್ದಾರೆ. ಇವೆಲ್ಲವೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ಎಸಗಿ ಸಂಪಾದಿಸಿದ್ದಾಗಿದೆ ಎಂದು ರವುಕುಮಾರ್ ಆರೋಪಿಸಿದ್ದಾರೆ.
SCROLL FOR NEXT