ಸಾಂದರ್ಭಿಕ ಚಿತ್ರ 
ರಾಜ್ಯ

ಕಲಬುರಗಿ: ಕಾಣೆಯಾಗಿದ್ದ ದಂಪತಿ ಜಮೀನಿನಲ್ಲಿ ಶವವಾಗಿ ಪತ್ತೆ!

ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದಿಂದ ನವೆಂಬರ್ 2 ರಿಂದ ಕಾಣಿಯಾಗಿದ್ದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಜಮೀನಿನಲ್ಲಿ ದಂಪತಿಯನ್ನು ಬೆಂಕಿ ಹಚ್ಚಿ ಸುಡಲಾಗಿದೆ.

ಕಲಬುರಗಿ: ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದಿಂದ ನವೆಂಬರ್ 2 ರಿಂದ ಕಾಣಿಯಾಗಿದ್ದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಜಮೀನಿನಲ್ಲಿ ದಂಪತಿಯನ್ನು  ಬೆಂಕಿ ಹಚ್ಚಿ ಸುಡಲಾಗಿದೆ.

ಅಜಯ್ ಕಾಳೆ (30)  ಜ್ಯೋತಿ (20) ಹತ್ಯೆಗೀಡಾದ ದಂಪತಿಗಳು. ಎರಡು ವರ್ಷಗಳ ಹಿಂದಷ್ಟೇ ಇವರ ವಿವಾಹವಾಗಿತ್ತು.

ಈ ದಂಪತಿ ನಾಪತ್ತೆಯಾದ ನಂತರ ಅಜಯ್ ತಾಯಿ,  ಜ್ಯೋತಿ ಸಹೋದರರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು.

ಆದಾಗ್ಯೂ, ಸೂಳೇ ಪೇಟೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದರು. ಈ  ಮಧ್ಯೆ  ಪೋಷಕರು ಅಪಹರಣ ಪ್ರಕರಣ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಸೂಳೇ ಪೇಟೆ ಠಾಣೆಯ ಸಿಬ್ಬಂದಿ ವಿರುದ್ಧವೇ ಪ್ರಕರಣ ದಾಖಲಿಸಿದ್ದರು.

ಅಪರಿಚ ಮಹಿಳೆಯ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಜಮೀನಿನಲ್ಲಿ ದಂಪತಿಯ ಅಸ್ಥಿಪಂಜರ ಕಂಡುಬಂದಿದೆ. ನಂತರ ಇದು  ಅಜಯ್ ಹಾಗೂ ಜ್ಯೋತಿ ಅವರ ಮೃತದೇಹ ಎಂಬುದು ಸ್ಪಷ್ಟವಾಗಿದೆ.

ಅಜಯ್ ನಿಡಗುಂದಾದಕ್ಕೆ ಬರುವ ಮುಂಚೆ ಮಹಾರಾಷ್ಟ್ರದಲ್ಲಿ ಸಣ್ಣದಾದ ಅಂಗಡಿ ಇಟ್ಟುಕೊಂಡಿದ್ದ. ಅಲ್ಲಿ ದರೋಡೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅಜಯ್  ನಿಡಗುಂದಾಕ್ಕೆ ಬಂದ ನಂತರವೂ ಕಳ್ಳತನ, ದರೋಡೆ ಕೃತ್ಯಗಳನ್ನು ಮುಂದುವರೆಸಿದ್ದ ಎಂಬುದಾಗಿ ಎಸ್ಪಿ ಶಶಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT