ಮಡಕೆ ತಯಾರಿಯಲ್ಲಿ ಅನಸೂಯಾ ಬಾಯಿ 
ರಾಜ್ಯ

ರಾಮನಗರ: ದೀಪಗಳ ತಯಾರಿಯಿಂದ ಬೇರೆಯವರ ಬಾಳಿಗೆ ಬೆಳಕಾಗಿರುವ ಅನುಸೂಯಾ ಬಾಯಿ

50 ವರ್ಷಗಳ ಹಿಂದೆ 10 ವರ್ಷದ ಅನುಸೂಯಾ ಬಾಯಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಮಣ್ಣಿನಿಂದ...

ರಾಮನಗರ: 50 ವರ್ಷಗಳ ಹಿಂದೆ 10 ವರ್ಷದ ಅನುಸೂಯಾ ಬಾಯಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಜೇಡಿ ಮಣ್ಣಿನಿಂದ ಮಡಕೆ ಮಾಡುವುದನ್ನು ನೋಡುತ್ತಾ ದಾರಿಯಲ್ಲಿ ಬೆರಗುಗಣ್ಣಿನಿಂದ ನೋಡುತ್ತಿದ್ದ ಪುಟ್ಟ ಹುಡುಗಿ. ಅಂದು ಮಣ್ಣಿನಿಂದ ತಯಾರಿಸಿದ ಪಿಗ್ಗಿ ಬ್ಯಾಂಕ್ (ಹಣ ಸಂಗ್ರಹಿಸಿಡುವ ಪೊಟ್ಟಣ) ನ್ನು ಖರೀದಿಸಲು ಬಾಲಕಿ ಆಸೆಪಟ್ಟಿದ್ದಳು. ಆ ಪುಟ್ಟ ಬಾಲಕಿಯೇ ಇಂದು ಜೇಡಿ ಮಣ್ಣಿನಿಂದ ತನ್ನ ಭವಿಷ್ಯ ಕಂಡುಕೊಂಡಿದ್ದಲ್ಲದೆ ಬೇರೆಯವರಿಗೂ ಭವಿಷ್ಯ ರೂಪಿಸಿದ್ದಾರೆ.

ಇಂದು ಅನಸೂಯಾ ಬಳಿ ಏಳು ಮಂದಿ ಕೆಲಸಗಾರರಿದ್ದು ಪ್ರತಿಯೊಬ್ಬರಿಗೂ ತಿಂಗಳಿಗೆ ಸುಮಾರು 15 ಸಾವಿರ ರೂಪಾಯಿಗಳವರೆಗೆ ವೇತನ ನೀಡುತ್ತಾರೆ. ರಾಮನಗರದ ಜಾನಪದ ಲೋಕದಲ್ಲಿ ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಿದ್ದಾರೆ. ಇಂದು ಜೇಡಿ ಮಣ್ಣಿನಿಂದ ತಯಾರಿಸಿದ 500ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ, ಅವುಗಳಲ್ಲಿ 50 ವೈವಿಧ್ಯ ಮಣ್ಣಿನ ದೀಪಗಳು ಕೂಡ ಸೇರಿವೆ. ವಿದೇಶಗಳಿಗೆ ಕೂಡ ಮಾರಾಟವಾಗುತ್ತದೆ. ಅವರು ಮಣ್ಣಿನ ದೀಪಗಳಿಗೆ, ಜೇಡಿ ಮಣ್ಣಿನ ಪಾತ್ರೆಗಳನ್ನು ವೈವಿಧ್ಯಮಯವಾಗಿ ರಚಿಸುವುದು ಗ್ರಾಹಕರನ್ನು ಸೆಳೆಯುತ್ತದೆ. ಸುವಾಸನಾ ಭರಿತ ದೀಪಗಳು, ಬಲವಾದ ತಂಗಾಳಿಯ ಮಧ್ಯೆ ದಹಿಸುವ ದೀಪ, ಕಡಿಮೆ ತೈಲ ಸಾಕಾಗುವ ದೀಪಗಳನ್ನು ತಯಾರಿಸಿಕೊಡುತ್ತಾರೆ.

ಕೆಲ ವರ್ಷಗಳ ಹಿಂದೆ ತಾವು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಮುಚ್ಚಿ ಹೋದಾಗ ಅನಸೂಯಾ ಈ ಕೆಲಸಗಾರರನ್ನು ತಮ್ಮ ಸಹಾಯಕ್ಕೆ ನೇಮಿಸಿಕೊಂಡರಂತೆ. ಇಬ್ಬರಿಗೆ ನೌಕರಿ ನೀಡಲು ಆರಂಭವಾಗಿದ್ದು, ಅದು ಏಳು ಮಂದಿಗೆ ಏರಿಕೆಯಾಗಿದೆ. ಪ್ರತಿಯೊಬ್ಬರು ತಿಂಗಳಿಗೆ 10ರಿಂದ 15 ಸಾವಿರಗಳಷ್ಟು ದುಡಿಯುತ್ತಾರೆ. ನನ್ನ ಲಾಭವನ್ನು ಕೆಲಸಗಾರರಿಗೆ ವೇತನವಾಗಿ ನೀಡುತ್ತೇನೆ. ನನಗೆ ಸ್ವಲ್ಪ ಲಾಭ ಬರುತ್ತದೆ, ಆದರೆ ಅದರಲ್ಲಿ ನನಗೆ ತೃಪ್ತಿಯಿದೆ ಎಂದರು.

ಅನಸೂಯಾ ವೃತ್ತಿಯಲ್ಲಿ ಬೆಳೆದಿದ್ದು ಹೇಗೆ?: ಅನಸೂಯಾ ಬಾಯಿ ಅವರ ಬಳಿ ಇರುವ ಕೆಲಸಗಾರರಿಗೆ ಕೂಡ ತಮ್ಮ ಆರ್ಥಿಕ ಮಟ್ಟ ಸುಧಾರಣೆಯಾಗಿದೆ ಎಂಬ ಸಂತೋಷವಿದೆ. ಇಷ್ಟು ಅಭಿವೃದ್ಧಿಯಾಗಲು ಅನಸೂಯಾ ಸಾಕಷ್ಟು ಶ್ರಮ ಹಾಕಿದ್ದಾರೆ. ರಾಮನಗರ ಜಿಲ್ಲೆಯ ಬಾಳಗೇರಿ ಗ್ರಾಮದವರಾದ ಅವರು ಚಿಕ್ಕ ಹುಡುಗಿಯಾಗಿರುವಾಗ ಮಡಕೆ ತಯಾರಿಕೆ ಘಟಕದಲ್ಲಿ ತಿಂಗಳಿಗೆ 40 ರೂಪಾಯಿಗೆ ದುಡಿಯುತ್ತಿದ್ದರಂತೆ. ಇವರ ಈ ಕೈಚಳಕದ ಮಣ್ಣಿನ ದೀಪ, ಮಡಕೆ, ಪಾತ್ರೆಗಳು ಹೊರ ದೇಶಕ್ಕೆ ಕೂಡ ಹೋಗಿವೆ ಅಲ್ಲದೆ ಜೇಡಿ ಮಣ್ಣಿನ ಮಡಕೆ ಮಾಡುವ ಬಗ್ಗೆ ಭಾರತ ಸರ್ಕಾರ ವತಿಯಿಂದ ಕೆಲವು ವಾರಗಳ ತರಬೇತಿ ಕೂಡ ನೀಡಿದ್ದಾರೆ.

ಜಾನಪದ ಲೋಕದ ರೂವಾರಿ ಹೆಚ್ ಎಲ್ ನಾಗೇಗೌಡ ಅನಸೂಯಾ ಅವರ ಕೌಶಲ್ಯವನ್ನು ಗುರುತಿಸಿ ಅಲ್ಲಿ ಇವರ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲು ಅವಕಾಶ ನೀಡಿದ್ದಾರೆ. ಇದರಿಂದ ಇವರ ಕಲೆ ಹೆಚ್ಚು ಜನರಿಗೆ ಪರಿಚಯವಾಗಿ, ಜನಪ್ರಿಯವಾಯಿತು. ಜೇಡಿಮಣ್ಣಿನಿಂದ ವಿವಿಧ ಪ್ರಯೋಗ ನಡೆಸಲು ಆರಂಭಿಸಿದರು. ಪಾತ್ರೆಗಳು, ನೀರಿನ ಬಾಟಲಿಗಳು, ಅಲಂಕಾರಿಕ ತುಣುಕುಗಳು, ಧಾರ್ಮಿಕ ವಿಗ್ರಹಗಳು, ಪ್ರಾಣಿಗಳು, ಗಂಟೆಗಳನ್ನು ತಯಾರಿಸತೊಡಗಿದರು. ದೇಶದ ವಿವಿಧ ಕಡೆಗಳಿಂದ ಪ್ರದರ್ಶನಕ್ಕೆ ಅವಕಾಶಗಳು ಬಂದವು. ಅನಸೂಯಾ ಅವರು ಆನ್ ಲೈನ್ ನ್ನು ವಸ್ತುಗಳ ಮಾರಾಟಕ್ಕೆ ಬಳಸುತ್ತಿಲ್ಲ, ಹಲವು ಇ ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಇವರ ಉತ್ಪನ್ನಗಳು ಮಾರಾಟಕ್ಕಿರುವುದನ್ನು ಕಾಣಬಹುದು. ಇತ್ತೀಚೆಗೆ ಅನಸೂಯಾ ಅವರ ಸೊಸೆ ವಾಟ್ಸಾಪ್ ಮೂಲಕ ಪ್ರಚಾರ ಮಾಡುತ್ತಿದ್ದಾರಂತೆ.

ವೃತ್ತಿ ಮೇಲಿನ ಬದ್ಧತೆಯಿಂದಾಗಿ ಅನಸೂಯಾ ಬಾಯಿ ಮದುವೆ ಕೂಡ ಮಾಡಿಕೊಂಡಿಲ್ಲ, ಮದುವೆಯಾದರೆ ಪತಿ ಎಲ್ಲಿಯಾದರೂ ವೃತ್ತಿಯನ್ನು ನಿಲ್ಲಿಸಬೇಕೆಂದರೆ ಎಂಬ ಭಯ ಕಾಡಿತಂತೆ ಅವರಿಗೆ. ಇದರಿಂದ ಅವರಿಗೆ ಯಾವುದೇ ವಿಷಾದ ಕೂಡ ಇಲ್ಲವಂತೆ. ನಾನು ಪ್ರತಿದಿನ, ಪ್ರತಿ ಗಳಿಗೆ ಕೂಡ ಕೆಲಸದ ಬಗ್ಗೆಯೇ ಯೋಚನೆ ಮಾಡುತ್ತೇನೆ ಎನ್ನುತ್ತಾರೆ ಅನಸೂಯಾ ಬಾಯಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT