ಮುಂದಿನ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆ ಕಲಿಕೆ ಕಡ್ಡಾಯವಾಗಲಿದೆ. ಕನಿಷ್ಟ ಒಂದು ವಿದೇಶಿ ಭಾಷೆ ಗೊತ್ತಿರುವವರಿಗೆ ಉದ್ಯೋಗ ಅವಕಾಶಗಳು ಹೆಚ್ಚು ಇರುವುದರಿಂದ ವಿದೇಶಿ ಭಾಷೆ ಕಲಿಕೆ ಕಡ್ಡಾಯ ಮಾಡಲು ಬೋರ್ಡ್ ಆಫ್ ಸ್ಟಡೀಸ್ ನಿರ್ಧರಿಸಿದೆ.
ಹಿರಿಯ ಪ್ರೊಫೆಸರ್ ಗಳ ಪ್ರಕಾರ ಜರ್ಮನಿ, ಜಪಾನ್, ಫ್ರಾನ್ಸ್ ಗಳಲ್ಲಿ ಮ್ಯಾನೇಜ್ಮೆಂಟ್ ಪದವೀಧರರಿಗೆ ಹೆಚ್ಚಿನ ಉದ್ಯೋಗ ಅವಕಾಶವಿದೆ. ಆದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಸಂವಹನ ಕೊರತೆ ಇರುವ ಕಾರಣದಿಂದಾಗಿ ಉದ್ಯೋಗಗಳು ಕೈ ಜಾರುತ್ತಿವೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಮ್ಯಾನೇಜ್ಮೆಂಟ್ ಕೋರ್ಸ್ ಗಳಿಗೆ ವಿದೇಶಿ ಭಾಷೆಯನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.