ಬೆಂಗಳೂರು: ಮುಂದಿನ ವರ್ಷದಿಂದ ವಿಕಲ ಚೇತನ ಮಕ್ಕಳಿಗೆ ಪ್ರತ್ಯೇಕವಾದ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ.
ವಿಶೇಷಚೇತನರ ಇಲಾಖೆ ಸ್ವಾತಂತ್ರ್ಯ ಉದ್ಯಾನದಲ್ಲಿ 'ವಿಶ್ವ ವಿಶೇಷಚೇತನರ ದಿನಾಚರಣೆ'ಯಲ್ಲಿ ಮಾತನಾಡಿದ ಅವರು ವಿಶೇಷಚೇತನರಿಗೆ ವಸತಿ ಶಾಲೆ, ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳ, ಕ್ರೀಡಾಪಟುಗಳಿಗೆ ಹೆಚ್ಚು ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು 2019-2020 ನೇ ಸಾಲಿನ ಬಜೆಟ್‌ನಲ್ಲಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಿಶೇಷಚೇತನರಿಗೆ ಹೆಚ್ಚು ಆತ್ಮವಿಶ್ವಾಸ ದೊರೆಯುವಂತೆ ಸರ್ಕಾರ ಅನೇಕ ಕಾರ್ಯಕ್ರಮ ಜಾರಿ ಮಾಡಿದೆ. ಇವುಗಳನ್ನು ಬಳಸಿಕೊಂಡು ಮಕ್ಕಳು ಬೆಳೆಯಬೇಕು ಎಂದು ತಿಳಿಸಿದ್ದಾರೆ.
ಬೆನ್ನುಹುರಿ ಸಮಸ್ಯೆಯಿರುವ ವಿಶೇಷಚೇತನರಿಗೆ ಮಾಸಾಶನದೊಂದಿಗೆ 5,000 ರೂ. ಹೆಚ್ಚುವರಿಯಾಗಿ ನೀಡಬೇಕು. ಇದುವರೆಗೆ 7 ಬಗೆಯ ಅಂಗವೈಕಲ್ಯ ಹೊಂದಿರುವವರನ್ನು ಗುರುತಿಸಲಾಗಿದೆ. ಈಗ 21 ಬಗೆಯ ಅಂಗವೈಕಲ್ಯ ಹೊಂದಿರುವವರು ರಾಜ್ಯದಲ್ಲಿದ್ದಾರೆ. ಹಿಂದಿನ ಗಣತಿ ಪ್ರಕಾರ 13 ಲಕ್ಷ ವಿಶೇಷಚೇತನರಿದ್ದಾರೆ. ಹೊಸದಾಗಿ ಗಣತಿ ನಡೆಸಲು ತಯಾರಿ ನಡೆದಿದ್ದು, ಇದಕ್ಕೆ ಮುಖ್ಯಮಂತ್ರಿಯವರು ಶೀಘ್ರ ಚಾಲನೆ ನೀಡಬೇಕು ಸಚಿವೆ ಜಯಮಾಲಾ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos