ಮೂಢನಂಬಿಕೆಗೆ ಸೆಡ್ಡು ಹೊಡೆದ ಜೋಡಿ: ಸ್ಮಶಾನದಲ್ಲಿ ವಿವಾಹ!
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ನಗರದಲ್ಲಿ ಮೌಢ್ಯ ವಿರೋಧಿ ಪರಿವರ್ತನಾ ದಿನವಾಗಿ ಆಚರಿಸಲಾಯಿತು.
ಈ ಪ್ರಯುಕ್ತ ನಗರದ ಸದಾಶಿವನಗರ ಸ್ಮಶಾನದಲ್ಲಿ ನವಜೋಡಿಯೊಂದು ಅಂತರ್ಜಾತಿಯ ವಿವಾಹವಾಗುವ ಮೂಲಕ ಮೌಢ್ಯಕ್ಕೆ ಸಡ್ಡು ಹೊಡೆಯಿತು.
ಈ ಸಮಾರಂಭವನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದು. ಈ ವೇಳೆ ನವದಂಪತಿಗೆ ರೂ.50 ಸಾವಿರ ಪ್ರೋತ್ಸಾಹ ಧನ ಚೆಕ್ ನೀಡಿ ಜಾರಕಿಹೊಳಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಅವರು, ಅಂತರ್ಜಾತಿ ವಿವಾಹವಾದವರಿಗೆ ಸರ್ಕಾರ ರೂ.2 ಲಕ್ಷ ಪ್ರೋತ್ಸಾಹ ಧನ ನೀಡುತ್ತಿದೆ. ಅದೇ ರೀತಿಯ ಭಯಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸ್ಮಶಾನದಲ್ಲಿ ವಿವಾಹವಾಗುವವರಿಗೆ ರೂ.2 ಲಕ್ಷ ಪ್ರೋತ್ಸಾಹ ಧನ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿಯವರು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾ.ಹೆಚ್.ಎನ್. ನಾಗಮೋಹನದಾಸ್, ಸಾಹಿತಿ ನಾಡೋಜ, ಬರಗೂರು ರಾಮಚಂದ್ರಪ್ಪ ಮಾತನಾಡಿದರು.
ದಂಪತಿಗಳು ಸ್ಮಶಾನದಲ್ಲಿಯೇ ವಿವಾಹವಾಗಿದ್ದು, ವಿವಾಹ ಸಂದರ್ಭದಲ್ಲಿ ಗುಂಪೊಂದು ಸ್ಮಶಾನಕ್ಕೆ ಬಂದು ವ್ಯಕ್ತಿಯೊಬ್ಬರ ಅಂತಿಮ ಸಂಸ್ಕಾರ ನೆರವೇರಿಸುತ್ತಿತ್ತು. ಮೂಢನಂಬಿಕೆ ವಿರುದ್ದ ಹೋರಾಡುವ ಸಲುವಾಗಿ ನವಜೋಡಿಗಳು ಸಚಿವ ಸತೀಶ್ ಜಾರಕಿಹೊಳಿಯವರೊಂದಿಗೆ ಕೈಜೋಡಿಸಿದರು.
ನಂಬಿಕೆಗಳು ಹಾಗೂ ಮೂಡನಂಬಿಕೆಗಳ ಕುರಿತಂತೆ ಸಮಾಜಕ್ಕೆ ಸಂದೇಶ ರವಾನಿಸಲು ನಾವು ನಿರ್ಧರಿಸಿದ್ದೆವು. ನಮ್ಮ ವಿವಾದಹ ವೇಳೆ ಕುವೆಂಪು ಅವರ ಬರಹಗಳೇ ಮಂತ್ರಗಳಾಗಬೇಕೆಂದು ಬಯಸಿದ್ದೆವು ಜೋಡಿಗಳಾದ ಸೊಪಾನ್ ಬಾಲಕೃಷ್ಣ ಹಾಗೂ ರೇಖಾ ಅವರು ಹೇಳಿದ್ದಾರೆ.
ರಾಜಕೀಯ ಲಾಭಗಳಿಗಾಗಿ ಕೆಲ ಜನರು ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ದೃಷ್ಟಿ ಹಾಗೂ ತತ್ತ್ವಗಳನ್ನು ಇದೀಗ ಸದುಪಯೋಗಗೊಳ್ಳುತ್ತಿದೆ. ಧರ್ಮ ಹಾಗೂ ಜಾತಿ ಆಧಾರದ ಮೇಲೆ ಪ್ರತೀ ನಾಯಕರು ಹಾಗೂ ವ್ಯಕ್ತಿಗಳನ್ನು ವಿಭಜಿಸಲಾಗುತ್ತಿದೆ. ಅಂಧ ನಂಬಿಕೆಗಳನ್ನು ದೂರಾಗಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos