ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕನ್ನಡ ಮಾದ್ಯಮ ವಿದ್ಯಾರ್ಥಿಗೆ ಒಲಿಯಿತು 'ನಾಸಾ' ಬಾಹ್ಯಾಕಾಶ ಸಂಶೋಧನೆ ಅವಕಾಶ!

ಕನ್ನಡ ಮಾದ್ಯಮದಲ್ಲಿ ಓದುವುದು ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದರ ನಡುವೆ ಕನ್ನಡ ಮಾದ್ಯಮದಲ್ಲೇ ಓದಿದ್ದ ಕಾಸರಗೋಡಿನ ವಿದ್ಯಾರ್ಥಿಯೊಬ್ಬನಿಗೆ ಇದೀಗ ಅಮೆರಿಕಾ....

ಇಬ್ರಾಹಿಂ ಖಲೀಲ್
Raghavendra Adiga
Updated On : 15 Dec 2018, 5:26 am
ಬದಿಯಡ್ಕ: ಕನ್ನಡ ಮಾದ್ಯಮದಲ್ಲಿ ಓದುವುದು ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದರ ನಡುವೆ ಕನ್ನಡ ಮಾದ್ಯಮದಲ್ಲೇ ಓದಿದ್ದ ಕಾಸರಗೋಡಿನ ವಿದ್ಯಾರ್ಥಿಯೊಬ್ಬನಿಗೆ ಇದೀಗ ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ದಲ್ಲಿ ಉನ್ನತ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಕಾಶ ಗಿಟ್ಟಿಸಿದ್ದಾನೆ!
ಕಾಸರಗೋಡು ಜಿಲ್ಲೆ ಬದಿಯಡ್ಕದ ಸಂಶೋಧನಾ ವಿದ್ಯಾರ್ಥಿ ಇಬ್ರಾಹಿಂ ಖಲೀಲ್ ತಾನು ಕನ್ನಡ ಮಾದ್ಯಮದಲ್ಲೇ ಕಲಿತು ಇದೀಗ ನಾಸಾದಲ್ಲಿ ಉನ್ನತ ವೈಜ್ಞಾನಿಕ ಸಂಶೋಧನೆ ಹಾಗೂ ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯ ವೃದ್ದಿ  ಕಾರ್ಯದಲ್ಲಿ ಅವಕಾಶ ಪಡೆದಿದ್ದಾನೆ.
ಮೇರಿ ಕ್ಯೂರಿ ಸಂಸ್ಥೆ ಈ ವಿದ್ಯಾರ್ಥಿಗೆ ಸಂಶೋಧನೆಗಾಗಿ ಆರ್ಥಿಕ ನೆರವು ನೀಡಿದ್ದು ಪುಲ್ ಕಾಂ ಯೋಜನೆಯಡಿ ರಾಕೆಟ್ ಉಡಾವಣೆಗೆ ಬೇಕಾದ ಉಡಾವಣಾ ವಾಹನದ ತಾಂತ್ರಿಕ ಸಾಮರ್ಥ್ಯ ಹೆಚ್ಚಳಕ್ಕೆ ಈ ಸಂಶೋಧನೆ ನೆಅವಾಗಲಿದೆ.

Advertisement

Advertisement

ಈ ಸಂಶೋಧನೆಯಲ್ಲಿ ಇಬ್ರಾಹಿಂ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ಬದಿಯಡ್ಕದ ವ್ಯಾಪಾರಿ ಮಜೀರ್ ಪೈಕಾ ಹಾಗೂ ಝುಮೈರಾ ಗೋಳಿಯಾಡಿ ದಂಪತಿ ಪುತ್ರರಾದ ಇಬ್ರಾಹಿಂ ಕೆಳ ಮದ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದಾರೆ. ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಕನ್ನಡ ಮಾದ್ಯಮದಲ್ಲಿ ಕಲಿತಿರುವ ಇವರು ಉತ್ತಮ ಶಿಕ್ಷಣ ಪಡೆದು ಅನೇಕ ಪ್ರತಿಷ್ಠಿತ ವಿದ್ಯಾರ್ಥಿ ವೇತನಗಳಿಗೆ ಸಹ ಭಾಜನರಾಗಿದ್ದಾರೆ.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ್ದ ಇಬ್ರಾಹಿಂಮಣಿಪಾಲದ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ, ಜರ್ಮನಿಯ ಬೋಕಂನರುರ್ ಕಪ್ಯುಟೇಷನ್ ವಿಶ್ವವಿದ್ಯಾನಿಲಯದಿಂದ ಉನ್ನತ ಪದವಿ ಗಳಿಸಿದ್ದಾರೆ.
ಪ್ರಸ್ತುತ ಅಮೆರಿಕಾದ ಓಹಿಯೋ ಪ್ರಾಂತದ ನಾಸಾ ಕೇಂದ್ರದಲ್ಲಿರುವ ಇವರು ರಡು ವಾರಗಳಲ್ಲಿ ನುರಿತ ಸಂಶೋಧಕರೊಡನೆ ಸಮಾಲೋಚಿಸಿ ಸಂಶೋಧನಾ ವಿಚಾರ ಮಂಡನೆಗೆ ಸಿದ್ದವಾಗುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments