ರಾಜ್ಯ

ವಿಷ ಪ್ರಸಾದ ದುರಂತ: ಐವರು ಅನಾಥ ಮಕ್ಕಳ ದತ್ತು ಸ್ವೀಕಾರ

Shilpa D
ಬಳ್ಳಾರಿ/ ಮಂಗಳೂರು: ಚಾಮರಾಜನಗರ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ 3 ಮಕ್ಕಳಿಗೆ ಆಸರೆ ನೀಡಲು ಆಳ್ವಾಸ್ ಶಿಕ್ಷಣ ಸಂಸ್ಥೆ ನಿರ್ಧರಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಆಳ್ವಾಸ್​ನ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಮೂವರು ಮಕ್ಕಳನ್ನು ದತ್ತು ಪಡೆದು ಪೂರ್ಣ ಪ್ರಮಾಣದ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕೊಡಲು ಸಿದ್ಧವಾಗಿದ್ದೇವೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ ತಿಳಿಸಿದ್ದಾರೆ.
ಇನ್ನೂ ದುರಂತದಲ್ಲಿ ಅನಾಥರಾಗಿರುವ ಮತ್ತಿಬ್ಬರು ಮಕ್ಕಳನ್ನು ಸಂಡೂರು ಮೂಲದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರ ದತ್ತು ತೆಗೆದುಕೊಂಡಿದೆ. 
ಮಾರಮ್ಮ ವಿಷ ದುರಂತದಲ್ಲಿ ಕೃಷ್ಣ ನಾಯ್ಕ್ ಮತ್ತು ಮೈಲಿಬಾಯಿ ದಂಪತಿ ಇಬ್ಬರು ಮೃತಪಟ್ಟಿದ್ದರು. ಆದರೆ ಇವರಿಗೆ ರಾಣಿಬಾಯಿ, ಪ್ರಿಯಾಬಾಯಿ ಮತ್ತು ರಾಜೇಶ್ ಮೂವರು ಮಕ್ಕಳಿದ್ದು, ತಂದೆ-ತಾಯಿ ಅಗಲಿಕೆಯಿಂದ ಅನಾಥರಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ನರ್ಸಿಂಗ್ ಮಾಡುತ್ತಿದ್ದು, ಮಗ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಈ ವೇಳೆ ಇವರ ಆಸರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಂದಾಗಿ, ಮೂವರು ಮಕ್ಕಳನ್ನು ದತ್ತು ಪಡೆಯುವುದಾಗಿ ಹೇಳಿತ್ತು. ಅಲ್ಲದೇ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸಲು ಆಳ್ವಾಸ್ ಸಂಸ್ಥೆ ತೀರ್ಮಾನ ಮಾಡಿತ್ತು.
ಅದರಂತೆ ಉನ್ನತ ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರುವ ತನಕ ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆ ಹಾಗೂ ಉದ್ಯೋಗ ಕಲ್ಪಿಸುವ ಜವಬ್ದಾರಿಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅವರು ಹೊತ್ತುಕೊಂಡಿದ್ದಾರೆ. ಇನ್ನೂ ಈ ಮೂವರು ಕೂಡ ಶೀಘ್ರವೇ ಆಳ್ವಾಸ್ ಸಂಸ್ಥೆಗೆ ಸೇರುವುದಾಗಿ ತಿಳಿಸಿದ್ದಾರೆ.
ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡಿರುವ ಎಸ್ ವಿಕೆ ಸಂಸ್ಥೆ, ಮಕ್ಕಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸುವುದಲ್ಲದೇ ಪದವಿ ವರಗೊ ವಿದ್ಯಾಭ್ಯಾಸ ಕಲ್ಪಿಸುವುದಾಗಿ ಎಸಿ ವಿಕೆ ಸಂಸ್ಥೆ ಕಾರ್ಯದರ್ಶಿ ಚಿದಂಬರ ನಾನಾವಟೆ ತಿಳಿಸಿದ್ದಾರೆ.
SCROLL FOR NEXT