ಬೆಳಗಾವಿ: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಎಮ್ಮೆ ಹಾಲನ್ನು ಶನಿವಾರ ಮಾರುಕಟ್ಟೆಗೆ ಪರಿಚಯಿಸಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೆಎಂಎಫ್ ಮುಖ್ಯಸ್ಥ ವಿವೇಕ್ ರಾವ್ ಪಾಟೀಲ್ ಅವರು. ಎಮ್ಮೆ ಹಾಲು ಎ-2 ಪ್ರೊಟೀನ್ ಹೊಂದಿದ್ದು, ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಡಿ ದೇಹದಲ್ಲಿರುವ ಕ್ಯಾಲರಿಗಳನ್ನು ಪರಿಣಾಮಕಾರಿ ರೀತಿಯಲ್ಲಿ ಕಡಿಮೆಯಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ನಾವು ಅರ್ಧ ಲೀಟರ್ ಪ್ಯಾಕ್ ಗಳ ಮೂಲಕ ಎಣ್ಣೆ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಒಂದು ಲೀಟರ್ ಎಮ್ಮೆ ಹಾಲಿಗೆ ರೂ.60 ನಿಗದಿ ಮಾಡಲಾಗಿದೆ. ಪ್ರತೀ ಲೀಟರ್ ಹಾಲಿಗೆ ಪ್ರೋತ್ಸಾಹ ಧನ ರೂ.5 ಸೇರಿ ಒಟ್ಟು ರೂ.38 ನೀಡಲಾಗುತ್ತಿದೆ. ಪ್ರತೀನಿತ್ಯ 60,000 ಲೀಟರ್ ಗಳಷ್ಟು ಎಮ್ಮೆ ಹಾಲರನ್ನು ಪಡೆಯಲಾಗುತ್ತಿದ್ದು. 35,000 ರೈತರು ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ.
ಬೆಂಗಳೂರು ಮತ್ತು ಸ್ಥಳೀಯ ಮಾರುಕಟ್ಟೆಗಳಿಗೆ ಪ್ರತೀ ನಿತ್ಯ 35,000 ಲೀಟರ್ ಗಳಷ್ಟು ಹಾಲನ್ನು ಪೂರೈಕೆ ಮಾಡಲಾಗುತ್ತಿದೆ. ಉಳಿದ ಹಾಲರನ್ನು ಕುಂದ, ಪೆಂಡ, ಪನ್ನೀರ್ ಹಾಗೂ ಇತರೆ ಪದಾರ್ಥಗಳನ್ನು ತಯಾರಿಸಲು ಬಳಕೆ ಮಾಡಲಾಗುತ್ತಿದೆ. ಗೋವಾ, ಸಾಂಗ್ಲಿ ಹಾಗೂ ಪುಣೆಯಿಂದಲೂ ಎಮ್ಮೆ ಹಾಲಿಗಾಗಿ ಬೇಡಿಕೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.