ಮೈಸೂರು: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಅತ್ತೆ-ಸೊಸೆ ಜಗಳದಲ್ಲಿ ಬಡಪಾಯಿ ಗಂಡನಿಗೆ ಪತ್ನಿ ಕಚ್ಚಿದ್ದಾಳೆ.
ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ, ತನ್ನ ಹೆಂಡತಿ ಮಹಿಮಾ ಮತ್ತು ತಾಯಿ ಲೀಲಾ ಕುಮಾರ್ ಜಗಳ ವಾಡುತ್ತಿದ್ದರು. ಇಬ್ಬರ ಮಾತು ಪರಸ್ಪರ ತಾರಕಕ್ಕೇರಿತು,
ಇದಾದ ನಂತರ ತನ್ನ ಪತ್ನಿ ಮೊಬೈಲ್ ನಲ್ಲಿ ಕರೆ ಮಾಡಿ ಯಾರಿಗೋ ಜಗಳದ ವಿಷಯ ತಿಳಿಸುತ್ತಿದ್ದಳು, ಇದನ್ನು ಪ್ರಶ್ನಿಸಿದ ನಾನು ಮನೆ ವಿಷಯ ಮೂರನೇಯವರಿಗೆ ಯಾಕೆ ತಿಳಿಸುತ್ತೀಯಾ ಎಂದು ಪ್ರಶ್ನಿಸಿದೆ. ಜೊತೆಗೆ ಯಾರ ಬಳಿ ವಿಷಯ ಹೇಳುತ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಲು ಆಕೆಯ ಮೊಬೈಲ್ ನೋಡಲು ಪ್ರಯತ್ನಿಸಿದೆ, ಈ ವೇಳೆ ಆಕೆ ನನ್ನನ್ನು ಬೈಯು ಕೈ ಹಿಡಿದು ಕೊಂಡು ಗಟ್ಟಿಯಾಗಿ ಕಚ್ಚಿದ್ದಾಳೆ ಎಂದು ವಿಶ್ವಾಸ್ ಆರ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ವಿಶ್ವಾಸ್ ಆರ್ಯ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.