ಬಳ್ಳಾರಿ: ನರಭಕ್ಷಕ ಚಿರತೆಗೆ ಒಂದೇ ತಿಂಗಳಿನಲ್ಲಿ ಇಬ್ಬರು ಮಕ್ಕಳು ಬಲಿಯಾಗುರುವ ದುರಂತ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕು ದೇವಲಾಪುರ ಗ್ರಾಮದಲ್ಲಿ ಚಿರತೆ ದಾಳಿಗೆ ಸಿಕ್ಕು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.15 ದಿನಗಳ ಹಿಂದೆ ಗ್ರಾಮದ ಸಮೀಪವೇ ಇರುವ ಸೋಮಲಾಪುರ ಎಂಬ ಇನ್ನೊಂದು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಮೂರು ವರ್ಷದ ಬಾಲಕನನ್ನು ಹಿಡಿದುಕೊಂಡು ಹೋಗಿತ್ತು. ಈಗ ಮತ್ತೆ ಜಯಸುಧಾ(13) ಎಂಬ ಬಾಲಕಿ ಚಿರತೆ ದಾಳಿಗೆ ಸಿಕ್ಕು ಸಾವಿಗೀಡಾಗಿದ್ದಾಳೆ.
ಮಂಗಳವಾರ ಶಾಲೆಗೆ ಕ್ರಿಸ್ಮಸ್ ಪ್ರಯುಕ್ತ ರಜೆ ಇದ್ದು ಪೋಷಕರೊಡನೆ ಜಮೀನಿಗೆ ತೆರಳಿದ್ದ ಬಾಲಕಿಯ ಜಯಸುಧಾ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ಬಾಲಕಿಯನ್ನು ಹೊತ್ತೊಯ್ದದ್ದನ್ನು ಕಂಡ ಪೋಷಕರು ಚೀರಾಟ ಪ್ರಾರಂಭಿಸಿದ್ದಾರೆ. ಮಾನವರ ಚೀರಾಟದಿಂದ ಕುಪಿತವಾದ ಚಿರತೆ ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದೆ.
ಪೋಷಕರು ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲನೀಡದೆ ಬಾಲಕಿ ಅಸುನೀಗಿದ್ದಾಳೆ.ಈ ಘಟನೆಯಿಂದ ಗ್ರಾಮ ನಿವಾಸಿಗಳು ಸಾಕಷ್ಟು ಆತಂಕಗೊಂಡಿದ್ದು ರಾತ್ರಿ ಸರಿಯಾಗಿ ನಿದ್ರೆ ಮಾಡಲೂ ಹೆದರುತ್ತಿದ್ದಾರೆ.
ಇನ್ನೊಂದೆಡೆ ಸೋಮವಾರವಷ್ಟೇ ಅರಣ್ಯಾಧಿಕಾರಿಗಳು ಚಿರತೆಯೊಂದನ್ನು ಸೆರೆ ಹಿಡಿದಿದ್ದರು ಆದರೆ ಇಂದು ಮತ್ತೆ ಚಿರತೆ ದಾಳಿ ನಡೆಸಿರುವ ಕಾರಣ ಅಧಿಕಾರಿಗಳು ಸೆರೆ ಹಿಡಿದಿರುವುದು ನರಭಕ್ಷಕ ವ್ಚಿರತೆಯನ್ನಲ್ಲ ಎಂಬುದು ಖಾತ್ರಿಯಾದಂತಾಗಿದೆ.
ಈ ಸಂಬಂಧ ಮಾದ್ಯಮದೊಡನೆ ಮಾತನಾಡಿದ ಡಿಎಫ್‍ಓ ರಮೇಶ್ ಕುಮಾರ್,ಚಿರತೆ ಹಿಡಿಯುವುದಕ್ಕೆ ಅರಣ್ಯ ಇಲಾಖೆ ಕಾರ್ಯಾಚರಣೆ ಅನ್ಡೆಸುತ್ತದೆ.ಗ್ರಾಮಸ್ಥರು ಒಬ್ಬೊಬ್ಬರೇ ಹೊಲಕ್ಕೆ ತೆರಳಬಾರದೆಂದು ಸೂಚಿಸಲಾಗಿದೆ ಎಂದಿದ್ದಾರೆ.
ಮೃತ ಬಾಲಕಿಯ ಕುಟುಂಬಕ್ಕೆ ಐದು ಲಕ್ಷ ಪರಿಹಾರದ ಭರವಸೆಯನ್ನು ಸರ್ಕಾರ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics