ಮಧುಕರ್ ಶೆಟ್ಟಿ-ಅಣ್ಣಾಮಲೈ 
ರಾಜ್ಯ

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ: ಖಡಕ್ ಅಧಿಕಾರಿ ಬಗ್ಗೆ ಡಿಸಿಪಿ ಅಣ್ಣಾಮಲೈ ಹೇಳಿದ್ದೇನು?

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿರುವ ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರು ಮಧುಕರ್ ಶೆಟ್ಟಿಯಂತ ಖಡಕ್ ಅಧಿಕಾರಿ ನಿಧನ ನನಗೆ ಅಘಾತ ತಂದಿದೆ ಎಂದರು.

ಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿರುವ ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರು ಮಧುಕರ್ ಶೆಟ್ಟಿಯಂತ ಖಡಕ್ ಅಧಿಕಾರಿ ನಿಧನ ನನಗೆ ಅಘಾತ ತಂದಿದೆ ಎಂದರು.
ಮಧುಕರ್ ಶೆಟ್ಟಿ ಒಬ್ಬ ದಕ್ಷ ಅಧಿಕಾರಿ. ಈ ರೀತಿ ಸಿಗಲು ಸಾಧ್ಯವಿಲ್ಲ. ಚಿಕ್ಕಮಗಳೂರಿಗೆ ಅವರ ನೀಡಿದ ಸೇವೆ ಅಭೂತಪೂರ್ವ. ನನಗೆ ಈಗಲೂ ನೆನಪಿದೆ. ಚಿಕ್ಕಮಗಳೂರಿನಲ್ಲಿ ಭೂ ಒತ್ತುವರಿಯಾದಾಗ ಮಧುಕರ್ ಶೆಟ್ಟಿ ಅವರು ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದರು. ಅವರ ದಕ್ಷತೆ ನಿಜಕ್ಕೂ ಅದ್ಭುತ ಎಂದು ಹೇಳಿದರು.
ಇನ್ನು ಡೈಲನ್ ಥಾಮಸ್ ಹೇಳಿದ್ದನ್ನ ನೆನೆದ ಅಣ್ಣಾಮಲೈ, Rage, rage against the dying of the light and do not go gentle into the good night" ಎಂದರು. ನೀವು ಹಾಗೆ ಹೋಗಿಲ್ಲ, ನಮ್ಮೊಡನೆ ಮಾದರಿಯಾಗಿ ಹೋಗಿದ್ದೀರಾ. ನಿಮ್ಮ ನಿರ್ಧಾರ, ನಿಮ್ಮ ಆಲೋಚನೆಗಳನ್ನೆಲ್ಲಾ ನಮಗೆ ನೀಡಿ ಹೋಗಿದ್ದೀರಾ. ನಾವು ನಿಮ್ಮ ದಾರಿಯಲ್ಲೇ ಸಾಗುವೆವು ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಹೇಳಿದ್ದಾರೆ.
47 ವರ್ಷದ ಮಧುಕರ್ ಶೆಟ್ಟಿ ಅವರು ಎಚ್1 ಎನ್1 ಸೋಂಕಿನಿಂದ ಬಳಲುತ್ತಿದ್ದು ಹೈದರಾಬಾದ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT