ಕಾರಿನಲ್ಲಿ ಹೊತ್ತಿ ಉರಿದ ಬೆಂಕಿ, ತಾಯಿ, ಮಗು ಸಜೀವ ದಹನ 
ರಾಜ್ಯ

ಬೆಂಗಳೂರು: ಕಾರಿಗೆ ಬೆಂಕಿ ಹೊತ್ತಿಕೊಂಡು ತಾಯಿ, ಮಗು ಸಜೀವ ದಹನ

ಅಪಾರ್ಟ್'ಮೆಂಟ್ ಕೆಳ ಮಹಡಿಯ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಾಯಿ ಹಾಗೂ ನಾಲ್ಕು ವರ್ಷದ ಗಂಡು ಮಗು ಸಜೀವ ದಹನವಾಗಿರುವ ದಾರುಣ ಘಟನೆ ವೈಟ್ ಫೀಲ್ಟ್'ನಲ್ಲಿ ಶುಕ್ರವಾರ ನಡೆದಿದೆ...

ಬೆಂಗಳೂರು: ಅಪಾರ್ಟ್'ಮೆಂಟ್ ಕೆಳ ಮಹಡಿಯ  ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಾಯಿ ಹಾಗೂ ನಾಲ್ಕು ವರ್ಷದ ಗಂಡು ಮಗು ಸಜೀವ ದಹನವಾಗಿರುವ ದಾರುಣ ಘಟನೆ ವೈಟ್ ಫೀಲ್ಟ್'ನಲ್ಲಿ ಶುಕ್ರವಾರ ನಡೆದಿದೆ. 
ನೆಲ್ಲೂರಹಳ್ಳಿಯ ಬೋರ್'ವೆಲ್ ರಸ್ತೆಯ ಸುಮಧುರ ಆಪಾರ್ಟ್ ಮೆಂಟ್ ನಿವಾಸಿಯಾಗಿರುವ ರಾಜೇಶ್ ಘಟ್ನಟ್ಟಿ ಅವರ ಪತ್ನಿ ನೇಹಾ ವರ್ಮಾ (30) ಹಾಗೂ ಅವರ ಪುತ್ರ ಪರಮ್ (4) ಮೃತ ದುರ್ದೈವಿಗಳು. 
ದಂಪತಿಗಳು ಬೆಳಗಾವಿ ಮೂಲದವರಾಗಿದ್ದು, 8 ವರ್ಷಗಳ ಹಿಂದಷ್ಟೇ ನಗರಕ್ಕೆ ಆಗಮಿಸಿದ್ದರು. ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾಜೇಶ್ ಅವರು ಸಾಫ್ಟ್ ವೇರ್ ಸಂಸ್ಥೆಯನ್ನು ನಡೆಸುತ್ತಿದ್ದು, ಬೆಳ್ಳಂದೂರಿನ ಪ್ಲೇ ಹೋಮ್ ನಲ್ಲಿ ಮಗು ಬಾಲಕನನ್ನು ಬಿಡಲಾಗುತ್ತಿತ್ತು. 
ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ನೇಹಾ ಅವರು ಪುತ್ರ ಪರಮ್ ಜೊತೆಗೆ ಕಾರಿನಲ್ಲಿ ಬಂದಿದ್ದಾರೆ, ಅಪಾರ್ಟ್'ಮೆಂಟ್ ನ ನೆಲಮಹಡಿಯಲ್ಲಿ ಕಾರನ್ನು ಪಾರ್ಕ್ ಮಾಡುವ ವೇಳೆ ಇದ್ದಕ್ಕಿದ್ದಂತೆಯೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕಾರು ಸ್ಫೋಟಗೊಂಡಿದೆ. ಈ ವೇಳೆ ನೇಹಾ ಹಾಗೂ ಪುಟ್ಟ ಮಗು ಸಜೀವವಾಗಿ ದಹನವಾಗಿದ್ದಾರೆ. 
ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಪಾರ್ಟ್'ಮೆಂಟ್'ನ ಭದ್ರತಾ ಸಿಬ್ಬಂದಿಗಳೇ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಾರಿನಲ್ಲಿದ್ದ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿಯ ನರ್ತನ ಮತ್ತಷ್ಟು ಹೆಚ್ಚಾಗಿದೆ. 
ಕಾರನ್ನು 2009ರಲ್ಲಿ ಖರೀದಿ ಮಾಡಲಾಗಿದ್ದು, ಘಟನೆ ವೇಳೆ ನೇಹಾ ಅವರ ಪತಿ ರಾಜೇಶ್ ಕಚೇರಿಯಲ್ಲಿದ್ದರು. ಅಪಾರ್ಟ್'ಮೆಂಟ್'ನಲ್ಲಿದ್ದ ನೆರೆಹೊರೆಯವರು ಕರೆ ಮಾಡಿ ರಾಜೇಶ್ ಅವರುಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ರಾಜೇಶ್ ಅವರು ಕುಟುಂಬ ಸದಸ್ಯರೆಂದು ಗುರ್ತಿಸಿದ್ದಾರೆ. 
ಘಟನೆ ವೇಳೆ ರಾಜೇಶ್ ಅವರ ತಾಯಿ ಮನೆಯಲ್ಲಿಯೇ ಇದ್ದು, ರಾಜೇಶ್ ಮನೆಗೆ ಬರುವವರೆಗೂ ಘಟನೆ ಬಗ್ಗೆ ಅವರಿಗೆ ಮಾಹಿತಿಯೇ ತಿಳಿದಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT