ಎರಡನೇ ಪತ್ನಿ ಮತ್ತು ಮಗಳ ಹತ್ಯೆಗೆ ಸುಪಾರಿ ನೀಡಿದ ಆರೋಪ, ಕಾಲೇಜು ಸಂಸ್ಥಾಪಕನ ವಿರುದ್ಧ ಪ್ರಕರಣ
ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಯ ಓಸ್ಟೀನ್ ಕಾಲೇಜಿನ ಸ್ಥಾಪಕನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬನನ್ನು ಆತನ ಎರಡನೇ ಪತ್ನಿ ಮತ್ತು ಮಗಳನ್ನು ಕೊಲ್ಲಲು ಸುಪಾರಿ ಹಂತಕರನ್ನು ನೇಮಿಸಿದ್ದನೆಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಕೋಣನಕುಂಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಶ್ರೀಕುಮಾರ್ (63) ಆರೋಪಿ ಎನ್ನಲಾಗಿದೆ ಇದಕ್ಕೂ ಆರು ತಿಂಗಳ ಹಿಂದೆ ಲೈಂಗಿಕ ಅಪರಾಧಕ್ಕೆ ಮಕ್ಕಳ ಬಳಕೆ ತಡೆ (ಪೋಸ್ಕೋ) ಕಾಯ್ದೆಯಡಿ ಈತನನ್ನು ಬಂಧಿಸಲಾಗಿತ್ತು. ಆರೋಪಿಯು ಜಾಮೀನಿನ ಮೇಲೆ ಹೊರಬಂದಿದ್ದನೆನ್ನಲಾಗಿದೆ.
36 ರ ಹರೆಯದ ಶ್ವೇತಾ (ಹೆಸರು ಬದಲಾಗಿದೆ) ಬೈಕಿನಲ್ಲಿ ಬಂದಿದ್ದ ಇಬ್ಬರು ಹಂತಕರು ಜನವರಿ 25 ರಂದುನನ್ನ ಹಾಗೂ ನನ್ನ ಮಗಳ ಮೇಲೆ ದಾಳಿ ಮಾಡಿದ್ದಾರೆ. ಹಾಗೂ ಆಕೆ ತನ್ನ ಪತಿ ವಿರುದ್ಧ ದಾಖಲಿಸಿದ್ದ ಪೋಸ್ಕೋ ಪ್ರಕರಣ ವನ್ನು ಹಿಂದೆಗೆದುಕೊಳ್ಳುವಂತೆ ಬೆದರಿಸಿದ್ದರು. ಹಾಗೆಯೇ ಅವರು ತಾವುಗಳು ಶ್ವೇತಾ ಹಾಗೂ ಆಕೆಯ ಮಗಳನ್ನು ಹತ್ಯೆ ಮಾಡಲು ಶ್ರೀಕುಮಾರ್ ನಿಂದ ನೇಮಕವಾಗಿರುವುದಾಗಿಯೂ ಹೇಳಿದ್ದರೆಂದು ಶ್ವೇತಾ ಪೋಲೀಸರಿಗೆ ನೀಡಿದ್ದ ದೂರಿನಲ್ಲಿ ದಾಖಲಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯಲ್ಲಿರುವ ಟ್ಯುಲಿಪ್ಸ್ ರೆಸಾರ್ಟ್ ನ ಮಾಲೀಕನಾದ ಶ್ರೀಕುಮಾರ್ ಚಾಮರಾಜಪೇಟೆ ನಿವಾಸಿಯಾಗಿದ್ದಾನೆ. ಕೆಲವು ವರ್ಷಗಳ ಹಿಂದೆ ಶ್ವೇತಾಳನ್ನು ವಿವಾಹವಾಗಿದ್ದ ಶ್ರೀಕುಮಾರ್ ತನ್ನ ಮೊದಲ ಪತ್ನಿ ಸತ್ತು ಹೋಗಿದ್ದಾಳೆಂದು ಸುಳ್ಳು ಹೇಳಿದ್ದನು. ಆದರೆ ಮದುವೆಯಾದ ಕೆಲ ತಿಂಗಳ ನಂತರ ಶ್ವೇತಾಗೆ ಶ್ರೀಕುಮಾರ್ ಮೊದಲ ಪತ್ನಿ ಇನ್ನೂ ಬದುಕಿದ್ದಾಳೆ ಎನ್ನುವ ವಿಚಾರ ತಿಳಿದಿದೆ. ಇದೇವೇಳೆ ಶ್ರೀಕುಮಾರ್ ಶ್ವೇತಾಳ 17 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದಕ್ಕಾಗಿ ಆಕೆ ಪೋಲೀಸರಿಗೆ ದೂರಿತ್ತಿದ್ದಳು.
ಪೋಸ್ಕೋ ಕಾಯ್ದೆಯಡಿ ಬಂಧಿತನಾಗಿದ್ದ ಶ್ರೀಕುಮಾರ್ ಗೆ ಕಳೆದ ಡಿಸೆಂಬರ್ ನಲ್ಲಿ ಜಾಮೀನು ದೊರಕಿತ್ತು. ಅಲ್ಲಿಂದ ಈಚೆಗೆ ಶ್ರೀಕುಮಾರ್ ಶ್ವೇತಾ ಹಾಗೂ ಆಕೆಯ ಮಗಳಿಗೆ ಸತತವಾಗಿ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಶ್ರೀಕುಮಾರ್ ಇದೀಗ ತಲೆಮರೆಸಿಕೊಂಡಿದ್ದು ಶ್ವೇತಾಳಿಗೆ ಬೆದರಿಕೆಯೊಡ್ಡಿದ್ದ ಬೈಕ್ ಸವಾರರ ಪತ್ತೆಗಾಗಿ ಪೋಲೀಸರು ಹುಡುಕಾಟ ನಡೆಸಿದ್ದಾರೆ.