ರಾಜ್ಯ

ಆರ್ ಟಿಇ ಕಾಯ್ದೆಯಡಿ ಸೀಟು ಹಂಚಿಕೆಗೆ ಅರ್ಜಿ ಸಲ್ಲಿಕೆ ಫೆ.20ರಂದು ಆರಂಭ

Sumana Upadhyaya
ಬೆಂಗಳೂರು: 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್ ಟಿಇ) ಪ್ರವೇಶ ಪ್ರಕ್ರಿಯೆ ಇದೇ 20ರಂದು ಆರಂಭವಾಗಲಿದೆ. 
ಸಾರ್ವಜನಿಕ ಶಿಕ್ಷಣ ಇಲಾಖೆಯ ವೇಳಾಪಟ್ಟಿ ಪ್ರಕಾರ, ಶಿಕ್ಷಣ ಹಕ್ಕು ಕಾಯ್ದೆಯಡಿ ಫೆಬ್ರವರಿ 20ರಿಂದ ಮಾರ್ಚ್ 21ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸೀಟು ಹಂಚಿಕೆಗೆ ಮೊದಲ ಸುತ್ತಿನ ಆನ್ ಲೈನ್ ಲಾಟರಿ ಆಯ್ಕೆ ಪ್ರಕ್ರಿಯೆ ಏಪ್ರಿಲ್ 6ರಂದು ನಡೆಯಲಿದೆ.
ಈ ಮಧ್ಯೆ ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ ಆರ್ ಟಿಇ ಕಾಯ್ದೆಯಡಿ ಅನುದಾನಿತ ಶಾಲೆಗಳನ್ನು ಕೂಡ ಒಳಪಡಿಸಲಾಗಿದೆ. 2018-19ರ ಶೈಕ್ಷಣಿಕ ವರ್ಷದಲ್ಲಿ ಅನುದಾನಿತ  ಶಾಲೆಗಳಿಗೆ ಸೀಟು ಹಂಚಿಕೆಯಲ್ಲಿ ಶೇಕಡಾ 25ರಷ್ಟು ಮೀಸಲಾತಿ ಇಡಲಾಗಿದೆ. ರಾಜ್ಯದಲ್ಲಿ 3,000ಕ್ಕೂ ಅಧಿಕ ಅನುದಾನಿತ ಶಾಲೆಗಳಿದ್ದು 15,000ಕ್ಕೂ ಅಧಿಕ ಸೀಟುಗಳು ಆರ್ ಟಿಇ ಕಾಯ್ದೆಯಡಿ ಒಳಪಡಿಸಲಾಗುತ್ತದೆ.
ಈ ಮಧ್ಯೆ, ಖಾಸಗಿ ಅನುದಾನಿತ ಶಾಲೆಗಳಿಗೆ ಮೇ 30ರ ನಂತರ ಶೇಕಡಾ 75ರಷ್ಟು ಸೀಟುಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ.
ಮುಖ್ಯಾಂಶಗಳು: ಫೆಬ್ರವರಿ 20ರಿಂದ ಮಾರ್ಚ್ 21ರವರೆಗೆ ಆನ್ ಲೈನ್ ಅರ್ಜಿಗಳ ಸಲ್ಲಿಕೆ.
ಮೊದಲ ಹಂತದ ಸೀಟು ಹಂಚಿಕೆಗೆ ಲಾಟರಿ ಎತ್ತುವಿಕೆ:ಏಪ್ರಿಲ್ 6ಕ್ಕೆ.
ಏಪ್ರಿಲ್ 7ರಿಂದ 17ರವರೆಗೆ: ಮೊದಲ ಹಂತದಲ್ಲಿ ಸೀಟು ಪಡೆದವರು ಆಯಾ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳುವುದು.
ಎರಡನೇ ಸುತ್ತಿನ ಸೀಟು ಹಂಚಿಕೆ: ಏಪ್ರಿಲ್ 26ಕ್ಕೆ 
ಏಪ್ರಿಲ್ 27ರಿಂದ ಮೇ.5ರವರೆಗೆ: ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಆಯಾ ಶಾಲೆಗಳಲ್ಲಿ ಪ್ರವೇಶ ಪಡೆಯುವುದು.
ಮೂರನೇ ಸುತ್ತಿನ ಸೀಟು ಹಂಚಿಕೆ: ಮೇ14ಕ್ಕೆ
ಮೇ 16ರಿಂದ 22ರವರೆಗೆ: ಮೂರನೇ ಸುತ್ತಿನಲ್ಲಿ ಪ್ರವೇಶ ಪಡೆದ ಮಕ್ಕಳು ಆಯಾ ಶಾಲೆಗಳಲ್ಲಿ ಪ್ರವೇಶ ಪಡೆಯುವುದು.
SCROLL FOR NEXT