ರಾಷ್ಟ್ರದ ಪ್ರಥಮ ಕೆನೋಪಿ ವಾಕ್ ದಾಂಡೇಲಿಯಲ್ಲಿ ಶೀಘ್ರದಲ್ಲೇ ಪ್ರಾರಂಭ
ದಾಂಡೇಲಿ: ದೇಶದ ಮೊದಲ ಕೆನೋಪಿ ವಾಕ್ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಶೀಘ್ರವಾಗಿ ಪ್ರಾರಂಭವಾಗಲಿದೆ. ಉತ್ತರ ಕನ್ನಡದ ಕ್ಯಾಸಲ್ ರಾಕ್ ಸಮೀಪದ ಕುವೇಶಿ ಪ್ರದೇಶದಲ್ಲಿ ನೆಲದಿಂದ 30 ಅಡಿ ಎತ್ತರಕ್ಕಿರುವ . 240 ಮೀಟರ್ ಉದ್ದದ ಕೆನೋಪಿ ವಾಕ್ ಹಾದಿಯನ್ನು ನಿರ್ಮಾಣ ಮಾಡಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ನಿರ್ಮಿಸಿರುವ ಈ ಕೆನೋಪಿ ವಾಕಿಂಗ್ ಮಾರ್ಗವನ್ನು ಫೆ.18ರಂದು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ರಾಜ್ಯ ಅರಣ್ಯ ಸಚಿವ ರಮಾನಾಥ ರೈ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಕೆನೋಪಿ ವಾಕಿಂಗ್ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಹಾಜರಿರಲಿದ್ದಾರೆ.
ಕೆನೋಪಿ ವಾಕ್ ಪ್ರವಾಸಿಗರಿಗೆ ಪರಿಸರ ಕುರಿತ ಜಾಗೃತಿಯನ್ನು ಹೆಚ್ಚಿಸುತ್ತದೆ ಮತ್ತು ಇದು ದೇಶದಲ್ಲೇ ಇಂತಹಾ ಯೋಜನೆಗಳಲ್ಲಿ ಮೊದಲನೇಯದಾಗಿದೆ ಎಂದು ಕಾಳಿ ಹುಲಿ ಸಂರಕ್ಷಿತಾರಣ್ಯದ ಮುಖ್ಯ ಅರಣ್ಯಾಧಿಕಾರಿ ಓ. ಪಾಲಯ್ಯ ಹೇಳಿದರು.
ಜಂಗಲ್ ಲಾಡ್ಜ್ ಗಳು ಮತ್ತು ರೆಸಾರ್ಟ್ ಗಳು ಅಥವಾ ಪ್ರವಾಸೋದ್ಯಮ ಇಲಾಖೆಯು ಈ ಕೆನೋಪಿ ವಾಕ್ ನ ವ್ಯವಸ್ಥೆ ಮಾಡುತ್ತದೆಂದು ನಿರೀಕ್ಷಿಸಲಾಗಿದೆ. ಇದರೊಡನೆ ಅರಣ್ಯ ಇಲಾಖೆ ಪ್ರವಾಸಿಗರಿಂದ ಅತ್ಯಲ್ಪ ಶುಲ್ಕವನ್ನು ಸಂಗ್ರಹಿಸಲಿದೆ. ಶುಲ್ಕ ಪ್ರಮಾಣವನ್ನು ಇನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ.
ಕೆನೋಪಿ ವಾಕ್ ಪ್ರಾರಂಭಿಸುವ ಯೋಜನೆ ಮೂರು ವರ್ಷಗಳಷ್ಟು ಹಳೆಯದಾದರೂ ಕೆಲವು ಕಾನೂನು ತೊಡಕುಗಳನ್ನು ಎದುರಿಸಿ ಯೋಜನೆ ಪೂರ್ಣಗೊಳಿಸಲು ಇಷ್ಟು ಸಮಯ ತಗುಲಿದೆ. "ಕೇಂದ್ರವು ಯೋಜನೆಗೆ ಅನುಮತಿ ನೀಡಿದೆ. ತಾಂತ್ರಿಕವಾಗಿ, ಈ ಕೆನೋಪಿ ವಾಕ್ ಇರುವ ಪ್ರದೇಶವು ಕಾಳಿ ಹುಲಿ ಸಂರಕ್ಷಿತ ಅರಣ್ಯ ದಾಂಡೇಲಿ ಅಭಯಾರಣ್ಯದ ಭಾಗವಾಗಿರುವ ಕ್ಯಾಸಲ್ ರಾಕ್ ವನ್ಯಜೀವಿ ವ್ಯಾಪ್ತಿಯಲ್ಲಿ ಬರಲಿದೆ.