ರಾಜ್ಯ

ಮುರುಡೇಶ್ವರದ ನೇತ್ರಾಣಿ ದ್ವೀಪಕ್ಕೆ ಬನ್ನಿ, ನೀರೊಳಗೆ ನಿಂತು ಪ್ರೇಮ ನಿವೇದನೆ ಮಾಡಿರಿ!

Raghavendra Adiga
ಕಾರವಾರ: ನೀವು ನಿಮ್ಮ ಪ್ರೇಮಿಗೆ ಪ್ರಪೋಸ್ ಮಾಡುವುದಕ್ಕಾಗಿ ಉತ್ತಮ ಸ್ಥಳದ ಆಯ್ಕೆಯಲ್ಲಿ ತೊಡಗಿದ್ದೀರಾ? ಹಾಗಾದರೆ ಕರ್ನಾಟಕದ ಕರಾವಳಿಯ ಮುರುಡೇಶ್ವರ ಇದಕ್ಕೆ ತಕ್ಕ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ನೀವು ನೀರಿನಡಿಯಲಿ ನಿಂತು ಪ್ರೇಮ ನಿವೇದನೆ ಮಾಡಿಕೊಳ್ಳಬಹುದು.
ಮುರುಡೇಶ್ವರ ಕಡಲ ಕಿನಾರೆಯಿಂದ ಸುಮಾರು 20 ಕಿಮೀ. ದೂರದಲ್ಲಿನ ದ್ವೀಪದ ಕಡೆ ನೀವು ಪಯಣಿಸಲು ಮೂಲಕ ನಿಮ್ಮ ಗೆಳೆಯ, ಗೆಳತಿಯರಿಗೆ ಪ್ರೇಮ ನಿವೇದನೆ ಮಾಡಬಹುದು. ಇದೇ ಫೆ.14 ಪ್ರೇಮಿಗಳ ದಿನದಂದು ನೇತ್ರಾಣಿ ಅಡ್ವೆಂಚರ್ ಸ್ಕೂಬಾ ಡ್ರೈವಿಂಗ್ ಸಂಸ್ಥೆ ಪ್ರೇಮಿಗಳಿಗಾಗಿ ನೀರಿನೊಳಗಡೆ ಪ್ರೇಮ ವಿವೇದನೆಗಾಗಿ ಅವಕಾಶ ಕಲ್ಪಿಸಿದೆ.
"ಜೀವನದ ಮಹತ್ವದ ಕ್ಷಣವನ್ನು ಎಂದಿಗೂ ಮರೆಯದಂತೆ ಮಾಡುವ ಸಲುವಾಗಿ ನಾವು ನೀರಿನೊಳಗೆ ಒಂದು ವೇದಿಕೆ ನಿರ್ಮಾಣ ಮಾಡಿದ್ದು ಪ್ರೇಮಿಗಳು ಪ್ರೇಮ ನಿವೇದನೆಗಾಗಿ ಅಲ್ಲಿಗೆ ಆಗಮಿಸಬಹುದು. ವ್ಯಾಲೆಂಟೈನ್ಸ್ ಡೇ ದಿನದಂದು, ಜನರು ತಮ್ಮ ಪ್ರೀತಿಪಾತ್ರರಿಗೆ ಪ್ರೇಮ ನಿವೇದನೆ ಮಾಡಲು ವಿಶೇಷ ಮಾರ್ಗಗಳನ್ನು ಹುಡುಕುತ್ತಾರೆ. 
"ಅಂತಹ ಜನರಿಗೆ ಫೆಬ್ರವರಿ 14 ರಂದು ನಾವು ನೀಡುತ್ತಿರುವ ಪ್ಯಾಕೇಜ್ ಎ ವ್ಯಾಲೆಂಟೈನ್ಸ್ ಎಸ್ಕೇಡೆಡ್. ಯಾರು ತಮ್ಮ ಜೀವನದ ವಿಶೇಷ ವ್ಯಕ್ತಿಗೆ ಸ್ಮರಣೀಯ ರೀತಿಯಲ್ಲಿ ಪ್ರಪೋಸ್ ಮಾಡ ಬಯಸುವರೋ ಅಂತಹಾ ವ್ಯಕ್ತಿಗಳು ಅಂದು ಇಲ್ಲಿಗೆ ಆಗಮಿಸಬಹುದು." ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಣೇಶ್ ಹರಿಕಂಠ  ಹೇಳಿದ್ದಾರೆ.
"ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡ್ರೈವ್ ಹೋಗಬಯಸುವವರನ್ನು ನಾವು ಸ್ವಾಗತಿಸುತ್ತೇವೆ. ಅಲ್ಲಿ ಹವಳದ ಬಂಡೆಗಳು, ಬಣ್ಣ ಬಣ್ಣದ ಮೀನು, ಆಮೆಗಳನ್ನು, ಕಡಲ ಜೀವ ರಾಶಿಯನ್ನು ಕಂಡು ಆನಂದಿಸಬಹುದು." ಅವರು ಹೇಳಿದರು. ಹೃದಯದ ಆಕಾರದಲ್ಲಿರುವ ನೇತ್ರಾಣಿ ದ್ವೀಪವು ಆಕಾಶದಿಂದ ನೋಡುವಾಗ ಭವ್ಯವಾಗಿ ಕಾಣಿಸುತ್ತದೆ. ಪಶ್ಚಿಮ ಕರಾವಳಿಯ ಶ್ರೀಮಂತ ಹವಳದ ಬಂಡೆಗಳು ಇಲ್ಲಿದೆ. ಡಿಸೆಂಬರ್ 2016ರಿಂದ ಇಲ್ಲಿ ಸ್ಕೂಬಾ ಡೈವಿಂಗ್ ಚಟುವಟಿಕೆಗಳನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.
SCROLL FOR NEXT