ರಾಜ್ಯ

ಎಲ್ ಪಿಜಿ ಅನಿಲ ವಿತರಕರ ನೇಮಕದಲ್ಲಿ ಮೀಸಲು: ದಿವ್ಯಾಂಗರಿಗೆ ಹೈಕೋರ್ಟ್ ನಿಂದ ರಿಲೀಫ್

Nagaraja AB

ಬೆಂಗಳೂರು: ಎಲ್ ಪಿಜಿ ಅನಿಲ ವಿತರಕರ  ಆಯ್ಕೆಯಲ್ಲಿ ಮೀಸಲು ಕೋರಿದ್ದ ದಿವ್ಯಾಂಗರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

 ರಾಜ್ಯದಲ್ಲಿ 238 ಎಲ್ ಪಿಜಿ ವಿತರಿಕರಿಗಾಗಿ ಭಾರತೀಯ ಅನಿಲ ನಿಗಮ ಹೊರಡಿಸಿದ ಆದೇಶಕನ್ನುಗುಣವಾಗಿ ಯಾವುದೇ ಪ್ರಕ್ರಿಯೆ ಕೈಗೊಳ್ಳದಂತೆ ಹೈಕೋರ್ಟ್ ತಡೆ
ನೀಡಿದೆ.

ರಾಜ್ಯ ವಿಕಲಚೇತನ  ರಕ್ಷಣಾ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ   ನ್ಯಾಯಾಧೀಶರ ಸ್ಥಾನದಲ್ಲಿದ್ದ ನ್ಯಾಯಾಧೀಶ ಹೆಚ್. ಜಿ. ರಮೇಶ್ ಹಾಗೂ ಪಿ.ಎಸ್. ದಿನೇಶ್ ಕುಮಾರ್ ಅವರನ್ನೊಳಗೊಂಡ ಪೀಠ ಆಗಸ್ಟ್ 17, 2017ರಂದು  ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದೆ.ಈ ವಿಚಾರಣೆಯನ್ನು ಫೆಬ್ರುವರಿ 19ರವರೆಗೂ ಮುಂದೂಡಿದೆ.
 
ಎಲ್ ಪಿಜಿ ವಿತರಣೆಯಲ್ಲಿ ದಿವ್ಯಾಂಗರಿಗೆ ಮೀಸಲಿಟ್ಟಿರುವ ಶೇಕಡಾ 3ರಷ್ಟು ಮೀಸಲಿನ ಬಗ್ಗೆ ಕೇಂದ್ರಸರ್ಕಾರ ಏನೂ ಹೇಳಿಲ್ಲ. ಆದರೆ, ತಮ್ಮಗೆ ಶೇಕಡ 5ರಷ್ಟು ಮೀಸಲು ನಿಗದಿಪಡಿಸಬೇಕು. ಈ ಸಂಬಂಧ ಭಾರತೀಯ ಅನಿಲ ನಿಗಮ, ಭಾರತ್ ಪೆಟ್ರೋಲಿಯಂ ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ  ಅನಿಲ ಮತ್ತು ಸಾಮಾಜಿಕ  ನ್ಯಾಯ, ಬಲರ್ವದನೆ ಸಚಿವಾಲಯ ಪ್ರತಿಕ್ರಿಯೆ ನೀಡಬೇಕೆಂದು ಅರ್ಜಿದಾರರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಮುಖ ಜಿಲ್ಲೆಗಳಲ್ಲಿ 238 ಎಲ್ ಪಿಜಿ ಅನಿಲ ವಿತರಕರ ನೇಮಕಾತಿಗಾಗಿ ಹೊರಡಿಸಿರುವ ಆದೇಶದಲ್ಲಿ ದಿವ್ಯಾಂಗರಿಗೆ ಶೇಕಡ. 5 ರಷ್ಟು ಮೀಸಲಿಟ್ಟಿಲ್ಲ. 11 ವಿತರಕರಲ್ಲಿ ಕೇವಲ 6 ಹುದ್ದೆಗಳನ್ನು ಮೀಸಲಿಡಲಾಗಿದೆ. ಹೀಗಾಗಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿರುವುದಾಗಿ ಅರ್ಜಿದಾರರ ಪರ ವಕೀಲ ಜೈನ ಕೊಥಾರಿ ತಿಳಿಸಿದ್ದಾರೆ.

SCROLL FOR NEXT