ಗುಡಿಬಂಡೆ: ಮೂರನೇ ಬಾರಿಯೂ ಹೆಣ್ಣು ಮಗು ಜನಿಸಿದ್ದರಿಂದ ಬೇಸತ್ತ ಮಹಿಳೆ, ತನ್ನ ಮೂವರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಚಿಕ್ಕಬಳ್ಳಾಪುರ ತಾಲೂಕಿನ ಗುಡಿಬಂಡೆ ಹನುಮಂತಪುರದ ನಾಗಶ್ರೀ ಎಂಬಾಕೆ ತನ್ನು ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಕೂಡ ಸಾವಿಗೆ ಶರಣಾಗಿದ್ದಾಳೆ,
ಗುರುವಾರ ಸಂಜೆ ನಾಗಶ್ರೀ 5 ವರ್ಷದ ದಿವ್ಯಶ್ರೀ, 3 ವರ್ಷದ ನವಶ್ರೀ ಹಾಗೂ 2 ತಿಂಗಳ ಮಗುವನ್ನು ಬಾವಿಗೆ ತಳ್ಳಿ ಅವರ ಪ್ರಾಣ ಹೋಗುವವರೆಗೂ ಕಾದು ನಂತರ ತಾನು ಕೂಡ ಅದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಾಗಶ್ರೀ ಕಳೆದ ಎರಡು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನನ ನೀಡಿದ್ದಳು, ಇದರಿಂದ ಖಿನ್ನತೆಗೊಳಗಾಗಿದ್ದು, ತಾನು ಬದುಕುವುದಿಲ್ಲವೆಂದು ಸಂಬಂಧಿಕರ ಬಳಿ ಹೇಳಿಕೊಂಡಿದ್ದಳೆಂದು ಚಿಕ್ಕಬಳ್ಳಾಪುರ ಎಸ್ ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ನಾಗಶ್ರೀ ಗಂಗರಾಜು ಎಂಬ ರೈತನನ್ನು ವಿವಾಹವಾಗಿದ್ದಳು, ಆಕೆಯ ಪೋಷಕರ ನಿಧನದ ನಂತರ ದಂಪತಿಯ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ, ಆದರೆ ನಾಗಶ್ರೀ ಗೆ ಗಂಡುಮಗು ಬೇಕೆ ಬೇಕು ಎಂಬ ಆಸೆಯಿತ್ತು. ಆದರೆ ಮೂರನೇಯದ್ದು ಹೆಣ್ಣು ಮಗುವಾದ ನಂತರ ಆಕೆ ತೀವ್ರ ಖಿನ್ನತೆಗೊಳಗಾಗಿದ್ದಳು ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.ಈ ಸಂಬಂಧ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics