ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ 
ರಾಜ್ಯ

ಸರ್ಕಾರ ಮೊದಲೇ ಎಚ್ಚೆತ್ತಿದ್ದರೆ ಕರ್ನಾಟಕಕ್ಕೆ ಮತ್ತಷ್ಟು ನೀರು ಸಿಗುತ್ತಿತ್ತು: ರಾಜೀವ್ ಚಂದ್ರಶೇಖರ್

ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮೊದಲೇ ಸೂಕ್ತ ಕಾನೂನು ಹೋರಾಟ ನಡೆಸಿದ್ದರೆ, ರಾಜ್ಯಕ್ಕೆ ಇನ್ನು 10 ಟಿಎಂಸಿ ನೀರು ಹೆಚ್ಚುವಾರಿಯಾಗಿ ಲಭಿಸುತ್ತಿತ್ತು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಶುಕ್ರವಾರ ಹೇಳಿದ್ದಾರೆ...

ಬೆಂಗಳೂರು: ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮೊದಲೇ ಸೂಕ್ತ ಕಾನೂನು ಹೋರಾಟ ನಡೆಸಿದ್ದರೆ, ರಾಜ್ಯಕ್ಕೆ ಇನ್ನು 10 ಟಿಎಂಸಿ ನೀರು ಹೆಚ್ಚುವಾರಿಯಾಗಿ ಲಭಿಸುತ್ತಿತ್ತು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಶುಕ್ರವಾರ ಹೇಳಿದ್ದಾರೆ. 
ಕಾವೇರಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಾವೇರಿ ನೀರಿನ ಮೇಲೆ ತಮಿಳುನಾಡು ರಾಜ್ಯಕ್ಕಿಂತ ಕರ್ನಾಟಕದ ಜನತೆ ಹೆಚ್ಚು ಅವಲಂಬಿತರಾಗಿದ್ದಾರೆ. ಕಾವೇರಿ ನೀರು ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಸೂಕ್ತವಾಗಿ ಕಾನೂನು ಹೋರಾಟ ರೂಪಿಸಿದ ಹಿನ್ನಲೆಯಲ್ಲಿ ನಾನು ಸೇರಿ ಎಲ್ಲರೂ ಟೀಕೆ ಮಾಡಿದ್ದೆವು. ಆದರೆ, ಕಾನೂನು ಸಮರದಲ್ಲಿ ಯೋಜಿತ ಹೋರಾಟ ನಡೆಸಿದ್ದರೆ 14.75 ಟಿಎಂಸಿ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 10 ಟಿಎಂಸಿ ನೀರು ರಾಜ್ಯಕ್ಕೆ ಸಿಗುತ್ತಿತ್ತು ಎಂದು ಹೇಳಿದ್ದಾರೆ. 
ಆಡಳಿತ ವರ್ಗ ಸೂಕ್ತವಾಗಿ ನಿರ್ವಹಣೆ ಮಾಡದ ಕಾರಣ ಇಂದು ಜಲಮೂಲಗಳು ಬತ್ತುವ ಸ್ಥಿತಿ ತಲುಪಿವೆ. ನೀರು ಇದೀಗ ಹೆಚ್ಚು ಸೀಮಿತವಾದ ಸಂಪನ್ಮೂಲವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಜಲ ಸಂಪನ್ಮೂಲಗಳನ್ನು ರಕ್ಷಿಸಿ, ನಿರ್ವಹಣೆ ಮಾಡಬೇಕಿದ್ದು, ಈ ಮೂಲಕ ಜಲ ಸಂಪನ್ಮೂಲವನ್ನು ಹೆಚ್ಚಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್