ರಾಜ್ಯ

ರಾಜಕಾಲುವೆ ದುರಸ್ಥಿ, ನಿರ್ವಹಣೆ ಸಂಬಂಧ ವರದಿ ಸಲ್ಲಿಕೆಗೆ ಬಿಬಿಎಂಪಿ ಹೈಕೋರ್ಟಿಗೆ ಸೂಚನೆ

Nagaraja AB

ಬೆಂಗಳೂರು:ಬೆಂಗಳೂರು ಮಹಾನಗರದಲ್ಲಿನ ರಾಜಕಾಲುವೆ  ದುರಸ್ಥಿ, ನಿರ್ವಹಣೆಗೆ ಸಂಬಂಧಿಸಿದಂತೆ ಪರಿಷ್ಕೃತ ವರದಿ ಸಲ್ಲಿಸುವಂತೆ ಹೈಕೋರ್ಟ್  ಬಿಬಿಎಂಪಿಗೆ ಸೂಚನೆ ನೀಡಿದೆ.

ಕಳೆದ ಮೂರು ವರ್ಷಗಳಲ್ಲಿ  ಕೇವಲ  177 ಕಿಲೋ ಮೀಟರ್ ದೂರದ  ರಾಜಕಾಲುವೆ
ವ್ಯವಸ್ಥೆಯನ್ನು ಮಾತ್ರ ದುರಸ್ಥಿ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್, ಸುನೀಲ್ ದತ್ತ್ ಯಾದವ್ ನೇತೃತ್ವದ ವಿಭಾಗೀಯ ಪೀಠ  ಅಸಮಾಧಾನ ವ್ಯಕ್ತಪಡಿಸಿದ್ದು, ಕಾನೂನು ಪ್ರಕಾರ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸುವಂತೆ  ಬಿಬಿಎಂಪಿಗೆ ಸೂಚಿಸಿದೆ.

ಬೆಂಗಳೂರು ಮಹಾನಗರದಲ್ಲಿನ ರಾಜಕಾಲುವೆ  ವ್ಯವಸ್ಥೆ  ಕುರಿತಂತೆ ನಾಗರಿಕ ಕ್ರಿಯಾ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಹೀಗೆ ಸೂಚನೆ ನೀಡಿದೆ.

ನಗರದಲ್ಲಿ ಒಟ್ಟಾರೇ,842 ಕಿಲೋ ಮೀಟರ್ ದೂರ ರಾಜಕಾಲುವೆ ವ್ಯವಸ್ಥೆ ಇದ್ದು, 1,367  ಕೋಟಿ ರೂ ವೆಚ್ಚದಲ್ಲಿ 177 ಕಿಲೋ ಮೀಟರ್ ದೂರದ ವ್ಯವಸ್ಥೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನೂ 192 ಕಿಲೋ ಮೀಟರ್ ದೂರದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿ ಹೈಕೋರ್ಟಿಗೆ ಮಾಹಿತಿ ನೀಡಿದೆ.

ಸುಮಾರು 155 ಕಿಲೋ ಮೀಟರ್  ದೂರದ ರಾಜಕಾಲುವೆ  ಲಿ ನಿರ್ವಹಣಾ ಕಾಮಗಾರಿ ಪ್ರಗತಿಯಲಿದೆ. ಇನ್ನೂ 239 ಕಿಲೋ ಮೀಟರ್ ದೂರದ ನಿರ್ವಹಣೆಗಾಗಿ 42. 70 ಕೋಟಿ ರೂ. ಸಲ್ಲಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

SCROLL FOR NEXT