ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜ್ಯ

'ಕಾವಲುಗಾರ' ಸರಿ ಇದ್ದಿದ್ದರೆ ನೀರವ್ ಮೋದಿ ಓಡಿಹೋಗಲು ಬಿಡುತ್ತಿರಲಿಲ್ಲ: ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬ್ರಿಟೀಷರ ವಿರುದ್ಧ ಹೋರಾಡಿದ, ಆಧುನಿಕ ರಾಜ್ಯ ಕಟ್ಟಿದ ಹುಲಿಗಳು ಮೈಸೂರು ನಗರದಿಂದ ಹೊರಹೊಮ್ಮಿದ್ದಾರೆ. ರೂ.11500 ವಂಚಿಸಿದ ಕ್ರಿಮಿನಲ್ ಗಳು ಪರಾರಿಯಾಗಲು ಮೈಸೂರಿನಲ್ಲಿ ಜನಿಸಿದವರು ಬಿಡುತ್ತಿರಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ...

ಬೆಂಗಳೂರು: ಬ್ರಿಟೀಷರ ವಿರುದ್ಧ ಹೋರಾಡಿದ, ಆಧುನಿಕ ರಾಜ್ಯ ಕಟ್ಟಿದ ಹುಲಿಗಳು ಮೈಸೂರು ನಗರದಿಂದ ಹೊರಹೊಮ್ಮಿದ್ದಾರೆ. ರೂ.11500 ವಂಚಿಸಿದ ಕ್ರಿಮಿನಲ್ ಗಳು ಪರಾರಿಯಾಗಲು ಮೈಸೂರಿನಲ್ಲಿ ಜನಿಸಿದವರು ಬಿಡುತ್ತಿರಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ. 
ಮೈಸೂರಿನ ವ್ಯಕ್ತಿ ಬೆಂಗಳೂರಿಗೆ ಹೋಗುವ ವೇಳೆಗೆ ನೈತಿಕತೆ ಕಳೆದುಕೊಂಡರು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರೋಪಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಟೀಕಾಪ್ರಹಾರ ನಡೆಸಿರುವ ಅವರು, ನೀರವ್ ಮೋದಿ ದೇಶ ಬಿಟ್ಟು ಪರಾರಿಯಾಗಿರುವ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ. 
ಮೈಸೂರಿನ ವ್ಯಕ್ತಿಯೊಬ್ಬರು ಕಾವಲುಗಾರನಾಗಿದ್ದರೆ ರೂ.11 ಸಾವಿರ ಕೋಟಿ ಲೂಟಿ ಹೊಡೆದ ವ್ಯಕ್ತಿಯನ್ನು ದೇಶದಿಂದ ತಪ್ಪಿಸಿಕೊಂಡು ಹೋಗಲು ಬಿಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಮೋದಿಯವರು ಸಾಮರ್ಥ್ಯವನ್ನು ಲೇವಡಿ ಮಾಡಿದ್ದಾರೆ.
ಅಲ್ಲದೆ, ಮೋದಿ ಮೈಸೂರು ಹಾಗೂ ಮೈಸೂರಿಗರ ಬಗ್ಗೆ ಲೇವಡಿ ಮಾಡಿರುವುದರನ್ನು ತೀವ್ರವಾಗಿ ಖಂಡಿಸಿರುವ ಅವರು, ಮೈಸೂರು ಎಂಬುದು ಬ್ರಿಟೀಷರ ವಿರುದ್ಧ ಹೋರಾಡಿದ ಹುಲಿಗಳು ಹುಟ್ಟಿದ ಸ್ಥಳ. ನವಕರ್ನಾಟಕ ನಿರ್ಮಾಣ ಹಾಗೂ ಭೂ ಸುಧಾರಣೆಯಲ್ಲಿ ಕ್ರಾಂತಿ ಮಾಡಿದವರನ್ನು ನಾಡಿಗೆ ನೀಡಿದೆ ಎಂದು ಕೊಂಡಾಡಿದ್ದಾರೆ. 
ಇದಕ್ಕೂ ಮೊದಲು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ಮೈಸೂರು-ಬೆಂಗಳೂರು ಜೋಡಿ ಮಾರ್ಗ, ವಿದ್ಯುದೀಕರಣಕ್ಕೆ ರಾಜ್ಯ ಸರ್ಕಾರ ಶೇ.60ರಷ್ಟು ಅನುದಾನ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇಡೀ ಯೋಜನೆ ಕೇಂದ್ರದ್ದು ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಅಲ್ಲಗೆಳೆದಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, ಡಿಯರ್ ಪ್ರಧಾನಮಂತ್ರಿ ನರೇಂದ್ರ ಮೋದಿರವರೇ, ಕಮಿಷನ್ ಬಗ್ಗೆ ನೀವು ಮಾತನಾಡುತ್ತಿದ್ದೀರಿ, ಬ್ಯಾಂಕ್ ಗಳಲ್ಲಿ ಹಣವನ್ನು ಜಮಾವಣೆ ಮಾಡಲು ಸಾಮಾನ್ಯ ಜನರನ್ನು ಸಾಲಿನಲ್ಲಿ ನಿಲ್ಲಿಸಿ, ಜನರ ರೂ.12,000 ಕೋಟಿ ಹಣವನ್ನು ಹೊತ್ತುಕೊಂಡು ನೀರವ್ ಮೋದಿ ಓಡಿಹೋಗುವಂತೆ ಮಾಡಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು