ರಾಜ್ಯ

ಎಲ್ಲರ ಗಮನ ಸೆಳೆಯುತ್ತಿದೆ ಗೊಮ್ಮಟಮೂರ್ತಿ ಮೇಲಿರುವ ಚಿನ್ನದ ಲೇಪಿತ 'ಛತ್ರಿತ್ರಿಯಾ'

Shilpa D
ಶ್ರವಣಬೆಳಗೊಳ: ಶ್ರವಣಬೆಳಗೊಳದ ವಿಂದ್ಯಾಗಿರಿ ಪರ್ವತದ ಮೇಲಿರುವ 58 ಅಡಿ ಏಕಶಿಲಾ ವಿಗ್ರಹದ ಮೇಲಿರುವ ಸ್ವರ್ಣಲೇಪಿತ ಛತ್ರಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ತ್ಯಾಗಮೂರ್ತಿಯ ತಲೆಯ ಮೇಲಿರುವ ಈ ಸ್ವರ್ಣಲೇಪನ ಮುಕುಟ ಸೂರ್ಯನ ಬೆಳಕಿನಿಂದ ಮತ್ತಷ್ಟು ಹೊಳೆಯುತ್ತಿದೆ. ಗೊಮ್ಮಟೇಶ್ವರನನ್ನು ನೋಡಲು ಬರುವ ಪ್ರವಾಸಿಗರು ಇದನ್ನು ನೋಡದೇ ಹೋಗಲು ಸಾಧ್ಯವಿಲ್ಲ,  ಇದನ್ನು ಛತ್ರಿತ್ರಿಯಾ ಎಂದು ಸಹ ಕರೆಯಲಾಗುತ್ತದೆ,  ಈ ಮಕುಟದ ಮೇಲೆ ಒಂದರ ಮೇಲೊಂದು ಮೂರು ಛತ್ರಿಗಳಿವೆ. ಈ ಛತ್ರಿಗಳನ್ನು ತಾಮ್ರ ಮತ್ತು ಕಂಚಿನೊಂದಿಗೆ ಕೆತ್ತಲಾಗಿದ್ದು. ಚಿನ್ನದ ಲೇಪನ ಮಾಡಲಾಗಿದೆ. 
ತಾಮ್ರದ ಶೀಟುಗಳಿಂದ ಇದನ್ನು ತಯಾರಿಸಲಾಗಿದ್ದು, ಒಂದರ ಮೇಲೊಂದನ್ನು ಜೋಡಿಸಲಾಗಿದೆ, ತಳಭಾಗದ ಛತ್ರಿ 18 ಅಡಿ ಅಗಲವಿದೆ, ಮಧ್ಯ ಭಾಗದ್ದು 12 ಅಡಿ, ಅತಿ ಮೇಲಿರುವ ಛತ್ರಿ 9 ಅಡಿ ಅಗಲವಿದೆ. ಈ ಮೂರು ಛತ್ರಿಗಳ ಮೇಲೆ ಬಂಗಾರದ ಕಳಸ ಜೋಡಿಸಲಾಗಿದೆ. 
ಮಂಗಳೂರು ಮೂಲದ 30 ಮಂದಿ ತಯಾರಕರು ಇದನ್ನು ಕೆತ್ತಿದ್ದಾರೆ. ಗೋವರ್ದನ್ ಮೆಟಲ್ಸ್ ಈ ಛತ್ರಿಯನ್ನು ತಯಾರಿಸಿದೆ. ಇದು 1,275 ಕೆಜಿ ತೂಕವಿದ್ದು, 4 ತಿಂಗಳ ಕಾಲ ಇದನ್ನು ತಯಾರಿಸಲಾಗಿದೆ.
SCROLL FOR NEXT