ವಿವಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು: ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ 
ರಾಜ್ಯ

ವಿವಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು: ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಭ್ರಷ್ಚಾಚಾರಕ್ಕೆ ಹೊಸ ಕಾನೂನು ರಚನೆ ಮಾಡಲು ಸರ್ಕಾರ ಮುಂದಾಗಿದ್ದು, ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಆಡಳಿತ ಮತ್ತು ನೇಮಕಾತಿಯಲ್ಲಿ ಪಾರದರ್ಶಕ ತರುವ ಉದ್ದೇಶ ಹೊಂದಿರುವ...

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಭ್ರಷ್ಚಾಚಾರಕ್ಕೆ ಹೊಸ ಕಾನೂನು ರಚನೆ ಮಾಡಲು ಸರ್ಕಾರ ಮುಂದಾಗಿದ್ದು, ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಆಡಳಿತ ಮತ್ತು ನೇಮಕಾತಿಯಲ್ಲಿ ಪಾರದರ್ಶಕ ತರುವ ಉದ್ದೇಶ ಹೊಂದಿರುವ 'ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-2017'ಕ್ಕೆ ಬುಧವಾರ ವಿಧಾನ ಪರಿಷತ್ ನಲ್ಲಿ ಅಂಗೀಕಾರ ದೊರೆಯಿತು. 
ಬೆಳಗಾವಿ ಅಧಿವೇಶನದ ವೇಳೆ ಕಳೆದ ಬಾರಿ ಅಂಗೀಕರಿಸಿದ್ದ ವಿಧೇಯಕಕ್ಕೆ ವಿಧಾನಪರಿಷತ್ ಬುಧವಾರ ಒಪ್ಪಿಗೆ ನೀಡಿತು. 
ವಿಧೇಯಕದ ಅನ್ವಯ ಇನ್ನು ಮುಂದೆ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನಗಳಿಗೆ ಸರ್ಕಾರ ಒಂದೇ ಹೆಸರನ್ನು ಶಿಫಾರಸು ಮಾಡಲಿದೆ. ಆ ಹೆಸರನ್ನು ರಾಜ್ಯಪಾಲರು ಒಮ್ಮೆ ಮಾತ್ರ ಸಕಾರಣ ನೀಡಿ ವಾಪಸ್ ಕಳುಹಿಸಬಹುದು. ಎರಡನೇ ಬಾರಿ ಸರ್ಕಾರದಿಂದ ಬಂದ ಹೆಸರನ್ನು ವಾಪಸ್ ಕಳುಹಿಸುವಂತಿಲ್ಲ. ಮುಂದಿನ 30 ದಿನಗಳೊಳಗೆ ಅನುಮೋದನೆ ನೀಡಿ ನೇಮಕ ಮಾಡಬೇಕಾಗುತ್ತದೆ. ಹಾಗಾಗಿ ಕುಲಪತಿಗಳ ನೇಪಕಾತಿ, ವಿಶ್ವವಿದ್ಯಾಲಯ ಆಡಳಿತ ವಿಚಾರಗಳಲ್ಲಿ ಕುಲಾಧಿಪತಿಗಲೂ ಆದ ರಾಜ್ಯಪಾಲರಿಗಿದ್ದ ಪರಮಾಧಿಕಾರ ಇನ್ನು ಮುಂದೆ ಇರದಂತಾಗುತ್ತದೆ. 
ಈವರೆಗೆ ಕುಲಪತಿ ಹುದ್ದೆಗೆ ಶೋಧನಾ ಸಮಿತಿ ಶಿಫಾರಸು ಮಾಡಿದ 3 ಹೆಸರರಲ್ಲಿ ಒಂದು ಹೆರಸನ್ನು ಸರ್ಕಾರ ಸೂಚಿಸಿದರೂ, ಮೂರೂ ಹೆಸರನ್ನೂ ರಾಜ್ಯಪಾಲರಿಗೆ ಕಳುಹಿಸಬೇಕಿತ್ತು. ರಾಜ್ಯಪಾರಲು ತಮ್ಮ ಪರಮಾಧಿಕಾರ ಬಳಸಿ ಮೂರು ಹೆಸರಲ್ಲಿ ಯಾವ ಹೆಸರನ್ನು ಬೇಕಿದ್ದರೂ ನೇಮಕ ಮಾಡಬಹುದಿತ್ತು. ವಿಧೇಯಕ ಅಂಗೀಕಾರಗೊಂಡಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಈ ಪದ್ಧತಿ ಇರುವುದಿಲ್ಲ. 
ವಿಧೇಯಕ ಅಂಗೀಕಾರಗೊಂಡಿರುವ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಭ್ರಷ್ಟಾಚಾರಗಳ ಮೇಲೆ ಸರ್ಕಾರ ಕಣ್ಗಾವಲಿಸಲಿದ್ದು, ವಿವಿಗಳಲ್ಲಿನ ಸಾರ್ವಜನಿಕ ಆರ್ಥಿಕ ವ್ಯವಸ್ಥೆ ಸೇರಿದಂತೆ ವಿವಿಧ ಕಾರ್ಯವೈಖರಿಗಳ ಮೇಲೆ ಗಮನ ಹರಿಸಲಿದೆ. ಪ್ರತೀಯೊಂದು ಹಣದ ವ್ಯವಹಾರಗಳ ಕುರಿತಂತೆಯೂ ಪ್ರತೀ ತಿಂಗಳೂ ವಿವಿಗಳು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು. ಅನುಮತಿಯಿಲ್ಲದೆ ನಡೆಸಲಾಗುತ್ತಿರುವ ವ್ಯವಹಾರಗಳು ಕೂಡಲೇ ಸ್ಥಗಿತಗೊಳ್ಳಲಿವೆ. ಅಲ್ಲದೆ, ವಿವಿಗಳಿಗೆ ಅಗತ್ಯವಿರುವ ವಸ್ತುಗಳ ಖರೀದಿಗಾಗಿಯೇ ಖರೀದಿ ಸಮಿತಿಯನ್ನು ಸರ್ಕಾರ ಶೀಘ್ರದಲ್ಲಿಯೇ ರಚನೆ ಮಾಡಲಿದೆ. ಉಪ ಕುಲಪತಿಗಳು ನಿವೃತ್ತಿ ಪಡೆದುಕೊಳ್ಳುವುದಕ್ಕೂ ಮೂರು ತಿಂಗಳಿಗೂ ಮುನ್ನ ಸರ್ಕಾರ ತಪಾಸಣಾ ಸಮಿತಿಯನ್ನು ರಚನೆ ಮಾಡಲಿದೆ. 
ಹೊಸ ಮಸೂದೆಯಲ್ಲಿ ಕುಲಪತಿಗಳಿಗೆ ಇರಬೇಕಿರುವ ವಿದ್ಯಾರ್ಹತೆಯನ್ನು ನಮೂದಿಸಲಾಗಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿಯವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video