ಬೆಂಗಳೂರು: ರಾಜ್ಯದಲ್ಲಿ ಜಿಲ್ಲೆಗೊಂದು ಸರ್ಕಾರಿ ಕಾನೂನು ಕಾಲೇಜು ತೆರೆಯಲು ಸರ್ಕಾರ ಯೋಜಿಸಿದೆ. ಚಾಮರಾಜನಗರದಲ್ಲಿ ಇಂತಹ ಮೊದಲ ಕಾಲೇಜು ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ಕಾನೂನು ಸಚಿವ ಟಿ. ಬಿ. ಜಯಚಂದ್ರ ತಿಳಿಸಿದ್ದಾರೆ.
ಮೇಲ್ಮನೆ ಇಂದು ಅಂಗೀಕರಿಸಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ
ತಿದ್ದುಪಡಿ ವಿಧೇಯಕ-2018ರ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಕಾನೂನು ಶಿಕ್ಷಣಕ್ಕಾಗಿ ಪ್ರತ್ಯೇಕ ನಿಧಿ ಸ್ಥಾಪಿಸಲಾಗುವುದು ಎಂದರು.
ಜನ ಸಾಮಾನ್ಯರಲ್ಲಿ ಕಾನೂನು ಪರಿಜ್ಞಾನ ಮೂಡಿಸುವ ನಿಟ್ಟಿನಲ್ಲಿ ಎಲ್ಲ ವಿಷಯಗಳ
ಪದವಿ ಹಂತದಲ್ಲೂ ಕಾನೂನು ವಿಷಯದ ಅಧ್ಯಯನವನ್ನು ಅಳವಡಿಸುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ ಎಂದು ತಿಳಿಸಿದರು.