ಶ್ರವಣಬೆಳಗೊಳ: ಜೈನ ಧರ್ಮ ತತ್ವ, ಸಿದ್ದಾಂತಗಳಿಂದ ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳನ್ನು ತೊಡೆದುಹಾಕಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜೈನಧರ್ಮ ಭಾರತದ ಅಮೂಲ್ಯ ರತ್ನವಿದ್ದಂತೆ ಎಂದು ಅವರು ಹೇಳಿದರು.
ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ವಿಶ್ವ ವಿಖ್ಯಾತ ಮಹಾ ಮಸ್ತಕಾಭಿಷೇಕದ ಅಂತಿಮ ದಿನದ ಸಮಾರಂಭದಲ್ಲಿ ಮಾತನಾಡಿದ ಸಿಂಗ್ "ಇದು ಹಿಂಸೆಯ ವಿಜ್ರಂಭಣೆಯ ಕಾಲ. ಪರಸ್ಪರರು ಅಧಿಕಾರಕ್ಕಾಗಿ ಹಗೆ ಸಾಧಿಸುವ ಕಾಲವಿದು. ಆದರೆ ಇದೆಲ್ಲವನ್ನೂ ತೊಡೆದು ಹಾಕಬಹುದಾದ ಸಿದ್ದಾಂತ ಯಾವುದಿದೆ? ಜೈನ ಧರ್ಮದ ಸಿದ್ದಾಂತಗಳಿಂದ ನಾವು ಈ ಹಿಂಸೆಯನ್ನು ತೊಡೆದು ಹಾಕಬಹುದು" ಎಂದರು.
ವಿಶ್ವದಲ್ಲಿ ಅಧಿಕಾರಕ್ಕಾಗಿ ಸ್ಪರ್ಧೆಗಳು ಹೆಚ್ಚುತ್ತಿದೆ. ಆದರೆ ಜೈನ ಧರ್ಮ ಬೋಧಿಸುವ, ಅನುಸರಿಸುವ ಶಾಂತಿ, ಸದ್ಭಾವನೆ ತತ್ವಗಳ ಕಂಡು ನನಗೆ ಅಚ್ಚರಿಯಾಗಿದೆ" ಅವರು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos